ಪ್ರತಿಭಟನೆಗೆ ಮುಂದಾದ ಖುಷ್ಬೂ ಅರೆಸ್ಟ್!

ಪ್ರತಿಭಟನೆಗೆ ಮುಂದಾದ ಖುಷ್ಬೂ ಅರೆಸ್ಟ್!

ಚೆನ್ನೈ : ಚಿದಂಬರಂನಲ್ಲಿ ಪ್ರತಿಭಟಿಸಲು ಮುಂದಾದ ಖ್ಯಾತ ನಟಿ, ರಾಜಕಾರಿಣಿ ಖುಷ್ಬೂ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ನಾಯಕ ತಿರುಮಾವಾಲವನ್ ಅವರ ಬೆಂಬಲಿಗರು ಹಿಂದೂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ತಿರುಮಾವಾಲವನ್ ಅವರ ಸ್ವಂತ ಕ್ಷೇತ್ರವಾದ ಚಿದಂಬರಂನಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ಮಹಿಳಾ ವಿಭಾಗ ನಿರ್ಧಾರ ಮಾಡಿದೆ.

ಹಾಗಾಗಿ ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿಕೊಂಡು ನಟಿ ಖುಷ್ಬು ಈ ಪ್ರತಿಭಟನೆಯಲ್ಲಿ ಸೇರಿಕೊಳ್ಳಲು ನಿನ್ನೆ ಮುಂಜಾನೆ ಚಿದಂಬರಂಗೆ ತೆರಳಿದ್ದಾರೆ. ಆ ವೇಳೆ ಪೊಲೀಸರು ಅವರ ಕಾರನ್ನು ಮುತ್ತುಕಾಡು ಬಳಿ ನಿಲ್ಲಿಸಿ ಖುಷ್ಬೂ ಮತ್ತು ಇತರರನ್ನು ಬಂಧಿಸಿದ್ದಾರೆ.

Related