ವಿ.ಪಕ್ಷ ನಾಯಕ ರೇಸ್‌ನಲ್ಲಿ ಖರ್ಗೆ

ವಿ.ಪಕ್ಷ ನಾಯಕ ರೇಸ್‌ನಲ್ಲಿ ಖರ್ಗೆ

ನವದೆಹಲಿ : ಮುಂದಿನ ತಿಂಗಳು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಗುಲಾಂ ನಬಿ ಆಜಾದ್ ನಿವೃತ್ತಿ ಹೊಂದಲಿದ್ದು, ಅನಂದ್ ಶರ್ಮಾ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ಈ  ಸಂಬಂಧ ಈಗಾಗಲೇ ಚರ್ಚೆಗಳು ಆರಂಭವಾಗಿದ್ದು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಎಚ್ಚರಿಕೆಯಿಂದ ನಿರ್ಧಾರ ಮಾಡಲಿದ್ದಾರೆ. ಆನಂದ್ ಶರ್ಮಾ ಸದ್ಯ ರಾಜ್ಯಸಭೆಯಲ್ಲಿ ಉಪಾಧ್ಯಕ್ಷರಾಗಿದ್ದಾರೆ.

ಶೀಘ್ರವೇ ಮುಂದಿನ ವಿರೋಧ ಪಕ್ಷದ ನಾಯಕರು ಯಾರು ಎಂಬುದನ್ನು ಪಕ್ಷ ಬಹಿರಂಗ ಪಡಿಸಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಮಂದಿ ಕಾಂಗ್ರೆಸ್ ನಾಯಕರ ಪೈಕಿ ಮಲ್ಲಿಕಾರ್ಜುನ ಖರ್ಗೆ ಕೂಡ ಇದ್ದರು, ಹೀಗಾಗಿ ಗುಲಾಂ ನಬಿ ಆಜಾದ್ ನಂತರ ಖರ್ಗೆ ಅವರಿಗೆ ಹುದ್ದೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಆನಂದ್ ಶರ್ಮಾ ಅವರಿಗೆ ಹುದ್ದೆ ನೀಡದಿದ್ದರೇ ಪಕ್ಷದಲ್ಲಿ ಮತ್ತಷ್ಟು ಒಳ ಜಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಇದನ್ನು ಗಮನದಲ್ಲಿರಿಸಿಕೊಂಡು ಹೈಕಮಾಂಡ್  ಮುಂದಿನ ಹೆಜ್ಜೆ ಇಡಲಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ಪತ್ರ ಬರಹಗಾರರು ಈಗಾಗಲೇ 6-7 ತಿಂಗಳುಗಳ ನಂತರವೂ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮನಸ್ಸು ಮಾಡಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆನಂದ್ ಶರ್ಮಾ ವಿರೋಧ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗಿದೆ.

Related