ಬೆಂಗಳೂರು: ಯಾರಿಗಾದರೂ ತೊಂದರೆಯಾದರೆ ಅವರು ತಕ್ಷಣವೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತಾರೆ. ಆದರೆ ಪೊಲೀಸರೇ ರಕ್ಷಣೆ ನೀಡದೆ ಹಲ್ಲೆ ಮಾಡಿದರೆ ಅದು ಯಾವ ನ್ಯಾಯ.
ಹೌದು, ರಕ್ಷಣೆ ನೀಡುವ ಪೊಲೀಸರೇ ಇದೀಗ ಬಸ್ ಚಾಲಕನ ಮೇಲೆ ದರ್ಪ ಮೆರೆದಿದ್ದಾರೆ. ಜಿಗಣಿ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರು ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ..
ತನ್ನ ಕಾರಿಗೆ ಸೈಡ್ ಬಿಡಲಿಲ್ಲ ಅಂತ ಬಸ್ ಚಾಲಕನ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಜಿಗಣಿ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ರಾತ್ರಿ ಸುಮಾರು 11 ಗಂಟೆಗೆ ಘಟನೆ ನಡೆದಿದೆ. ಎಣ್ಣೆ ಮತ್ತಲ್ಲಿ ಬಸ್ ಡಿಪೋ ಒಳಗೆ ಕಾರು ನುಗ್ಗಿಸಿ ಬಸ್ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಹಲ್ಲೆ ಕೂಡ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಬಸ್ ಚಾಲಕ ಸುನೀಲ್ ಮೇಲೆ ಹಲ್ಲೆ ಮಾಡಿ ಪೊಲೀಸ್ ಸಿಬ್ಬಂದಿ ದರ್ಪ ತೋರಿದ್ದಾರೆ. ಹಲ್ಲೆ ಖಂಡಿಸಿ ಡಿಪೋದಿಂದ ಬಸ್‌ಗಳನ್ನು ಹೊರ ತೆಗೆಯುವುದಿಲ್ಲ ಎಂದು ಬಿಎಂಟಿಸಿ ಚಾಲಕರು ಪ್ರತಿಭಟಿಸಿದ್ದಾರೆ.
ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಯನ್ನ ಬಂಧಿಸುವ ತನಕ ಬಸ್ ಓಡಿಸಲ್ಲ. ಕರ್ತವ್ಯಕ್ಕೆ ಹಾಜರಾಗಲ್ಲ ಎಂದು ಜಿಗಣಿ ಬಸ್ ಡಿಪೋ 27ರ ಸಿಬ್ಬಂದಿ ಪಟ್ಟು ಹಿಡಿದಿದ್ದರು.