ಕಂಠೀರವ ಕ್ರೀಡಾಂಗಣ ಅವ್ಯವಸ್ಥೆಯ ಅಗರ?

ಕಂಠೀರವ ಕ್ರೀಡಾಂಗಣ ಅವ್ಯವಸ್ಥೆಯ ಅಗರ?

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಅವ್ಯವಸ್ಥೆಯ ಆಗರವಾಗಿತ್ತು.

ಲಕ್ಷಾಂತರ ಜನರು ಸೇರಿದ್ದ ಕ್ರೀಡಾಂಗಣದಲ್ಲಿ ಬಿಸಿಲಿನ ಝಳಪಿಗೆ ಜನರು ತತ್ತರಿಸಿ ಹೋದರು.

ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಕ್ರೀಡಾಂಗಣದಲ್ಲಿ ನೆರೆದಿದ್ದ ಜನರಿಗೆ ಮತ್ತು ಮಾಧ್ಯಮದವರಿಗೆ ನೆರಳನ್ನು ಏರ್ಪಡಿಸುವಲ್ಲಿ ಅಥವಾ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಯಿತು.

ರಾಜಾರಾಮ್ ಮೋಹನ್ ರಾಯ್ ರಸ್ತೆಯ ಪ್ರವೇಶ ದ್ವಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಮುಖ್ಯದ್ವಾರದಲ್ಲಿ ಪ್ರವೇಶ ಕಲ್ಪಿಸುವಲ್ಲಿ ಹರಸಾಹಸ ಮಾಡಬೇಕಾಯಿತು. ಬ್ಯಾರಿಕೇಡ್ ಗಳನ್ನು ಅಡ್ಡ ಇಟ್ಟು ಪ್ರವೇಶಕ್ಕೆ ಅನುಮತಿ ಪತ್ರ ಹೊಂದಿರುವವರನ್ನು ಮಾತ್ರ ಅನುಮತಿ ನೀಡುವಾಗ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಪೋಲಿಸರನ್ನೇ ದೂಡಿ ಒಳಗೆ ನುಗ್ಗಿದರು. ಪೊಲೀಸರು ಎಷ್ಟೇ ಪ್ರಯತ್ನಿಸಿದರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ನಿಯಂತ್ರಿಸಲು ವಿಫಲರಾದರು.

ಸೋಮಾರಿ ಪೇದೆ?

ಒಂದು ಕಡೆ ಪೊಲೀಸರು ಪ್ರವೇಶ ಪತ್ರ ಪರಿಶೀಲಿಸಿ ಒಳಗೆ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದರೆ ಮುಖ್ಯ ಪೊಲೀಸ್ ಪೇದೆ ಕೈಕಟ್ಟಿಕೊಂಡು ನಿಂತಿದ್ದರು.

ಪ್ರವೇಶ ಪಡೆದು ಒಳಗೆ ಸೇರಿದ್ದ ಕಾರ್ಯಕರ್ತರನ್ನು ಮತ್ತು ಮಾಧ್ಯಮದವರನ್ನು ಏಕವಚನದಲ್ಲಿ ಸಂಭೋಧಿಸುತ್ತಿದ್ದರು.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿದ್ದರೆ ಚಿತ್ರದಲ್ಲಿ ಇರುವ ಈ ಪೊಲೀಸ್ ಮುಖ್ಯ ಪೇದೆ ತಮ್ಮ ದರ್ಪ ತೋರುವಲ್ಲಿ ನಿರತರಾಗಿದ್ದರು.

Related