ಕಂದಮ್ಮನನ್ನು ಕೊಂದ್ಳು ತಾಯಿ

ಕಂದಮ್ಮನನ್ನು ಕೊಂದ್ಳು ತಾಯಿ

ಚಿತ್ರದುರ್ಗ, ಫೆ. 25 : ತಾಯಿಯೊಬ್ಬಳು ತನ್ನ ಹತ್ತು ತಿಂಗಳ ಹೆಣ್ಣು ಮಗುವನ್ನು ಡ್ರಂನಲ್ಲಿ ಮುಳುಗಿಸಿ ಕೊಂದು ಆಕೆಯೂ ಸಹ ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಐನಳ್ಳಿ ಗ್ರಾಮದಲ್ಲಿ ನಡೆದಿದೆ.
ಆಶಾಬಾಯಿ (24) ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ. ಹೆರಿಗೆ ಬಳಿಕ ಆಶಾಬಾಯಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ನೋವು,ತೀವ್ರ ಅನಾರೋಗ್ಯ ತಾಳಲಾರದೆ ಆತ್ಮಹತ್ಯೆ ನಿರ್ಧಾರ ಮಾಡಿದ್ದಳು.
ತಾನು ಸತ್ತರೆ ಮಗು ಅನಾಥ ಆಗುತ್ತೆ ಎಂಬ ಕಾರಣಕ್ಕೆ ಆಶಾ ತಮ್ಮ 10 ತಿಂಗಳ ಹೆಣ್ಣು ಮಗುವನ್ನು ಡ್ರಂನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನು ಸಹ ನೇಣಿಗೆ ಶರಣಾಗುವುದಾಗಿ ಡೆತ್ ನೋಟ್ ನಲ್ಲಿ ನಮೂದಿಸಿದ್ದಾಳೆ.

Related