ಆಪರೇಷನ್ ಹಸ್ತಕ್ಕೆ ಮಹತ್ವದ ನಿರ್ಧಾರ ಕೈಗೊಂಡ ಕಮಲ

ಆಪರೇಷನ್ ಹಸ್ತಕ್ಕೆ ಮಹತ್ವದ ನಿರ್ಧಾರ ಕೈಗೊಂಡ ಕಮಲ

ಬೆಂಗಳೂರು, ರಾಜ್ಯದಲ್ಲಿ ಇತ್ತಿಚಿಗೆ ಆಪರೇಷನ್‌ ಹಸ್ತ ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು ಬಿಜೆಪಿ ನಾಯಕರನ್ನು ಸೆಳೆಯಲು ಪಕ್ಷದ ವಲಯದಲ್ಲಿ ಮಹತ್ವದ ನಿರ್ದಾರಗಳನ್ನು ತೆಗೆದು ಕೊಳ್ಳುತ್ತಿದೆ.

ಈಗಾಗಲೇ ಕೆ ಆರ್‌ ಪುರಂದ ಶಾಸಕರಾದ ಭೈರತಿ ಬಸವರಾಜ್‌ ಬೆಂಬಲಿಗರಾದ ಕೆಲವು ಮಾಜಿ ಬಿಬಿಎಂಪಿ ಅಧಿಕಾರಿಗಳು ಬಿಜೆಪಿ ಪಕ್ಷ ಬಿಟ್ಟು ಕೈ ಸೆರಿಕೊಂಡಿದ್ದಾರೆ.

ಇನ್ನು ಒಂದು ಕಡೆ ಕಾಂಗ್ರೆಸ್ ಆಪರೇಷನ್ ಆಟ ಶುರು ಮಾಡಿದ್ರೆ, ಸೋಮವಾರ ನಡೆದ ಬಿಜೆಪಿ ಕೋರ್​ಕಮಿಟಿ ಸಭೆಯಲ್ಲಿ ಆದ ಚರ್ಚೆ, ನಾಯಕರ ಮನಸ್ಥಿತಿ ಬೇರೆಯದ್ದನ್ನೇ ಹೇಳುತ್ತಿದೆ.

ಕಾಂಗ್ರೆಸ್‌ ಸರ್ಕಾರದತ್ತ ಮುಖ ಮಾಡಿರುವ ಬಾಂಬೆ ಫ್ರೆಂಡ್ಸ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದು ಬೇಡ ಎಂಬ ಮನಸ್ಥಿತಿಗೆ ಬಿಜೆಪಿ ನಾಯಕರು ಬಂದಿದ್ದಾರೆ.

ಶಾಸಕ ಎಸ್.ಟಿ. ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅಸಮಾಧಾನದ ಬಗ್ಗೆ ಚರ್ಚೆ ನಡೆಸಿದ್ದು, ಬಿಜೆಪಿಗೆ ವಲಸೆ ಬಂದವರು ತಿರಗಾ ಕಾಂಗ್ರೆಸ್ ಬಾಗಿಲು ತಟ್ಟಿದರೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುವುದು ಬೇಡ ಎಂಬ ಮನಸ್ಥಿತಿಗೆ ಬಿಜೆಪಿ ರಾಜ್ಯ ನಾಯಕರು ಬಂದಿದ್ದಾರೆ.

ಬಿಜೆಪಿ ಪಕ್ಷದವರು ಕಾಂಗ್ರೆಸ್‌ ಸೇರಿಕೊಳ್ಳುವುದಾದರೆ ನಾವು ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾರು ಕಾಂಗ್ರೆಸ್‌ ಸೇರಿಕೊಳ್ಳುತ್ತಾರೋ ಅವರ ಮನವರಿಸಬೇಕು ಎಂದರು

2024ರ ಲೋಕಸಭೆ ಚುನಾವಣೆ ಬಗ್ಗೆ ಮಾತ್ರ ಗಮನ ಹರಿಸಿ. ಪಕ್ಷ ಸಂಘಟನೆ ಬಲಗೊಳಿಸುವ ಬಗ್ಗೆ ಮಾತ್ರ ಗಮನ ಹರಿಸಬೇಕು. ಕಾಲಕ್ಕೆ ತಕ್ಕಂತೆ ಎಲ್ಲವೂ ಆಗುತ್ತದೆ, ಈಗ ನಾವು ಎಡವಿದ್ದೇವೆ. ಶಾಸಕರ ಜೊತೆಗೆ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಬೇಕು. ನಮ್ಮದು ಕೇಡರ್ ಬೇಸ್ ಪಾರ್ಟಿ, ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು. ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಗೊಂದಲದಿಂದ ಸಮಸ್ಯೆಯಾಗಿದೆ. ಬಿಎಲ್​ಪಿ ನಾಯಕ, ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಶೀಘ್ರ ನಿರ್ಧರಿಸಿ. ಈ ಬಗ್ಗೆ ಬೇಕಿದ್ದರೆ ಮತ್ತೊಮ್ಮೆ ಬಿಜೆಪಿ ಹೈಕಮಾಂಡ್​ ನಾಯಕರನ್ನು ಭೇಟಿಯಾಗಿ ಒತ್ತಾಯಿಸೋಣ ಅಂತಾ ಸಭೆಯಲ್ಲಿ ನಿರ್ಧರಿಸಲಾಗಿದೆ.

Related