ಕೈ ಕುತಂತ್ರ ರಾಜಕಾರಣ ಮಾಡುತ್ತಿದೆ; ಹೆಚ್.​ಡಿ.ಕೆ

ಕೈ ಕುತಂತ್ರ ರಾಜಕಾರಣ ಮಾಡುತ್ತಿದೆ; ಹೆಚ್.​ಡಿ.ಕೆ

ಬೆಂಗಳೂರು: ರಾಜ್ಯದಲ್ಲಿ 2023ನೆಯ ಚುನಾವಣೆ ಗೆಲ್ಲಲೆಂದು ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಹೆಸರಿನಲ್ಲಿ ಕುತಂತ್ರ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮತದಾನಕ್ಕೂ ಮುನ್ನ ಕುಣಿಗಲ್​, ಆರ್​ಆರ್ ನಗರ ಸೇರಿ 42 ವಿಧಾನಸಭಾ ಕ್ಷೇತ್ರಗಳಲ್ಲಿ 60 ಸಾವಿರ ಕುಟುಂಬಗಳಿಗೆ ಕೂಪನ್​​​​​ ಕಾರ್ಡ್ ಹಂಚಿದ್ದಾರೆ. ಈ ಕಾರ್ಡ್‌ ಹಿಂದೆ ಬಾರ್‌ಕೋಡ್ ನಂಬರ್ ಇದ್ದು, ಶಾಪ್‌ನಲ್ಲಿ ನೀವು ಸ್ವೈಪ್ ಮಾಡಿ 3,500 ರಿಂದ 5 ಸಾವಿರ ಬೆಲೆಯ ವಸ್ತು ಖರೀದಿ ಮಾಡಬಹುದು ಎಂದು ಆಮಿಷ ಒಡ್ಡಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದರಿಂದ ಯಾವುದೇ ಉಪಯೋಗವಿಲ್ಲ. ಬಿಜೆಪಿ ಸರ್ಕಾರದ್ದು 40% ಹೇಳಿದ್ರಲ್ಲ, ಈಗ ಏನು ಹೇಳ್ತೀರಿ, 5 ಸಾವಿರ 60 ಸಾವಿರ ಕಾರ್ಡ್ ಅಂದ್ರೆ 30 ಕೋಟಿಯಾಯ್ತು, 30 ಕೋಟಿ ಗಿಫ್ಟ್ ಕೊಡಬೇಕು‌ ನೀವಿಗಾ ಎಂದು ಕಾಂಗ್ರೆಸ್​ ವಿರುದ್ದ ಹರಿಹಾಯ್ದಿದ್ದಾರೆ.

 

Related