ಅಧಿಕಾರಿಗಳಿಗೆ ಶಾಸಕ ಎಂ ಸತೀಶ್ ರೆಡ್ಡಿ ಕಡಕ್ ಎಚ್ಚರಿಕೆ

ಅಧಿಕಾರಿಗಳಿಗೆ ಶಾಸಕ ಎಂ ಸತೀಶ್ ರೆಡ್ಡಿ ಕಡಕ್ ಎಚ್ಚರಿಕೆ

ಬೊಮ್ಮನಹಳ್ಳಿ: ನಿರಂತರ ಮಳೆಯಿಂದ ಜನ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಬೊಮ್ಮನಹಳ್ಳಿ ಶಾಸಕ ಎಂ ಸತೀಶ್ ರೆಡ್ಡಿ ಕಟ್ಟುನಿಟ್ಟಿನ ಆದೇಶ ನೀಡಿದರು.

ಇಂದು ಬೊಮ್ಮನಹಳ್ಳಿಯ ಬಿಬಿಎಂಪಿ ಕಚೇರಿಯಲ್ಲಿ ಆಯೋಜನೆ ಮಾಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು, ಜನರು ಸಮಸ್ಯೆ ಎಂದು ಅಲೆದಾಡುವ ಸ್ಥಿತಿ ಬರುವ ಮುನ್ನ ನಾವು ಕೆಲಸ ಮಾಡಬೇಕು, ಬಿಡಬ್ಲ್ಯೂಎಸ್ಎಸ್ಬಿ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ಸಾಕಷ್ಟು ಕಡೆ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ಅಧಿಕಾರಿಗಳು ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ಕಾಮಗಾರಿಗಳನ್ನು ತಾವೇ ಮಾಡಿ ಮುಗಿಸಬೇಕು, ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಕಾರಣ ನೀಡುವುದನ್ನು ಬಿಟ್ಟು ಕೆಲಸ ಮಾಡಬೇಕು, ಬೇಜವಾಬ್ದಾರಿ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಕೆಲವು ಇಲಾಖೆಯಲ್ಲಿನ ಅಧಿಕಾರಿಗಳು ತಮ್ಮ ಸ್ವಂತ ಕೆಲಸವನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಟೆಂಡರ್ ಮುಗಿದು ಕಾಮಗಾರಿಯನ್ನು ಮಾಡಿ ಮುಗಿಸಬೇಕಾದ ಅಧಿಕಾರಿಗಳು ನಿರ್ಲಕ್ಷ ತೋರುತ್ತಿರುವುದು ಕಂಡುಬಂದಿದೆ. ಮುಖ್ಯಮಂತ್ರಿಗಳು ಸಭೆ ನಡೆಸಿದಾಗ ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದಾರೆ, ಆದರೂ ಕೂಡ ಮಳೆ ಸಮಯದಲ್ಲೂ ಕೂಡ ಕೆಲವು ಇಲಾಖೆ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ. ಜನ ಮಳೆ ಬಂದಾಗ ನಿದ್ದೆ ಮಾಡದೆ ವರಪರದಾಡುವ ಸ್ಥಿತಿ ನಿರ್ಮಾಣ ಆಗುತ್ತಿದೆ, ಇದಕ್ಕೆಲ್ಲ ಅಧಿಕಾರಿಗಳು ಕಾರಣ ಎನ್ನುವ ದೂರು ಕೇಳಿ ಬರಬಾರದು ಎಂದು ಹೇಳಿದರು.

ಬೇಗೂರು ಕೆರೆಯಿಂದ ಮಳೆ ಬಂದಾಗ ಹೆಚ್ಚಿನ ನೀರು ಬೊಮ್ಮನಹಳ್ಳಿ ಹಾಗೂ ಎಚ್ಎಸ್ಆರ್ ಬಡಾವಣೆಯಂತ ಬರುತ್ತಿದೆ, ಇದರಿಂದಾಗಿ ಹೆಚ್ಚು ನೀರು ಒಳಬಂದು ಸಮಸ್ಯೆ ಎದುರಾಗಿದೆ, ಈಗಾಗಲೇ ಮುಖ್ಯ ಮಂತ್ರಿಗಳು ಈಗಾಗಲೇ 200 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದು,ಆದ್ದರಿಂದ ಅಧಿಕಾರಿಗಳು ಆದಷ್ಟು ಬೇಗ ತಮ್ಮ ಇಲಾಖೆಯಲ್ಲಿ ಆಗಬೇಕಾದ ಕಾಮಗಾರಿಗಳ ಸಿದ್ದತೆ ಮಾಡಿ ಮುಗಿಸಬೇಕು ಎಂದರು.

ಬಿಬಿಎಂಪಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿದಾಗ ಇನ್ನಷ್ಟು ಜನರಲ್ಲಿ ಅಧಿಕಾರಿಗಳ ಬಗ್ಗೆ ವಿಶ್ವಾಸ ಹೆಚ್ಚಾಗಲಿದೆ ಎಂದರು.

ಬಿಡಿಎ ಕಾಂಪ್ಲೆಕ್ಸ್ ನಿರ್ಹಹಣೆ ಇಲ್ಲ-ಬೊಮ್ಮನಹಳ್ಳಿ ಬಿಡಿಎ ಕಾಂಪ್ಲೆಕ್ಸ್ ನಲ್ಲಿ ಮೂಲಭೂತ ಸೌಕರ್ಯ ಇಲ್ಲದೇ ತೊಂದರೆ ಆಗುತ್ತಿದೆ, ಕೇಂದ್ರ ಸಚಿವರು ಹಾಗೂ ಶಾಸಕರ ಕಚೇರಿ ಇದ್ದರೂ ಇಲ್ಲಿ ಸ್ವಚ್ಚತೆ ಇಲ್ಲ, ಅನುಧಾನ ಇದ್ದರೂ ನಿರ್ವಹಣೆ ಮಾಡದೇ ಇರುವ ಅಧಿಕಾರಿಗಳನ್ನು ಅಮಾನತು ಮಾಡುವ ಎಚ್ಚರಿಕೆ ನೀಡಿದರು.

ಜನಪ್ರತಿನಿಧಿಗಳ ನಿರ್ಲಕ್ಷ್ಯ ಸಲ್ಲದು- ಕೆಲವು ಅಧಿಕಾರಿಗಳು ಸರ್ಕಾರದಿಂದ ಆಗುವ ಕಾಮಾಗಾರಿಗಳನ್ನು ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೇ ಕಾಮಗಾರಿಗಳನ್ನು ಮಾಡಿ, ಬಳಿಕ ಯಾವುದೋ ಸಂಘಟನೆಯ ಜೊತೆ ಕೈಜೋಡಿಸಿ ಉದ್ಘಾಟನೆ ಮಾಡಿರುವುದು ಗಮನಕ್ಕೆ ಬಂದಿದ್ದು, ಇಂತಹ ಘಟನೆಗಳು ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಮಳೆಯಿಂದ ಬೊಮ್ಮನಹಳ್ಳಿ ಬಾಗದಲ್ಲಿ ಆಗುವ ತೊಂದರೆಗಳ ಸ್ಥಳಗಳ ಬಗ್ಗೆ ಮಾಹಿತಿ ಪಡೆದು ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ನಿರ್ಲಕ್ಷ್ಯ ತೋರಿದರೆ ತೊಂದರೆ ಎದುರಿಸಲು ಸಿದ್ದಾರಾಗಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತ ಕೃಷ್ಣಮೂರ್ತಿ, ಮುಖ್ಯ ಅಭಿಯಂತರರಾದ ಶಶಿಕುಮಾರ್, ಕಾರ್ಯಪಾಲಕ ಅಭಿಯಂತರರಾದ ಶೇಷಾದ್ರಿ, ಉಪ ಆಯುಕ್ತೆ ಶಶಿಕಲಾ ಮತ್ತಿತರರು ಹಾಜರಿದ್ದರು.

 

Related