ಉನ್ನತ ಮಟ್ಟದ ತನಿಕೆ ನೆಡೆಸಿ ಪಾರಂಪರಿಕ ವೈದ್ಯರಿಗೆ ನ್ಯಾಯ ದೂರಕಿಸಿಕೊಡಬೇಕು

ಉನ್ನತ ಮಟ್ಟದ ತನಿಕೆ ನೆಡೆಸಿ ಪಾರಂಪರಿಕ ವೈದ್ಯರಿಗೆ ನ್ಯಾಯ ದೂರಕಿಸಿಕೊಡಬೇಕು

ಬೆಂಗಳೂರು: ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ (ರಿ) ಮನವಿಯನ್ನು ಪರಿಗಣಿಸಿ 2016,17 ನೇ ಸಾಲಿನಿಂದ ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದು, ಪಾರಂಪರಿಕ ವೈದ್ಯಕೀಯ ಸೇವೆ ಮಾಡುತ್ತಿರುವ ಪಾರಂಪರಿಕ ವೈದ್ಯರ ಮಕ್ಕಳಿಗೆ ಕರ್ನಾಟಕ ಸರ್ಕಾರವು ಬಿ.ಎ.ಎಂ.ಎಸ್ ವಿದ್ಯಾಭ್ಯಾಸಕ್ಕಾಗಿ ಶೇ. 2ರಷ್ಟು ಮೀಸಲಾತಿಯನ್ನು ನೀಡಿದೆ. ಆದರೆ ಆಯುಶ್ ಇಲಾಖೆ ಇದುವರೆವಿಗೂ 2 ಸೀಟುಗಳನ್ನು ಮಾತ್ರ ನೀಡಿಕೊಂಡು ಬಂದಿದೆ. 2023ನೇ ಸಾಲಿನಲ್ಲಿ ಪಾರಂಪರಿಕ ವೈದ್ಯರ ಮೀಸಲಾತಿಯನ್ನು ನೀಡುವಾಗ ಪಾರಂಪರಿಕ ವೈದ್ಯರೇ ಅಲ್ಲದ ಗುಂಡೇನಹಟ್ಟಿ, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆಯ ಸುಕನ್ಯ ಬಿನ್ ಚಂಬಯ್ಯ ಗದಿಗಯ್ಯ ಹಿರೇಮಠ ಇವರಿಗೆ ಸರ್ಕಾರದ ಮಾನದಂಡವನ್ನೇ ಪರಿಗಣಿಸದೇ ಅಯುಶ್ ಇಲಾಖೆ ಬಿ.ಎ.ಎಂ.ಎಸ್ ಸೀಟನ್ನು ನೀಡಿದೆ  ಎಂದು ರಾಜ್ಯಾದ್ಯಕ್ಷರಾದ  ಜಿ. ಮಹದೇವಯ್ಯ ಹೇಳಿದರು.

ಪ್ರೆ ಸ್ ಕ್ಲಬ್ ನ ಸುದ್ದಿಘೊಷ್ಟಿಯಲ್ಲಿ ಮಾತನಾಡಿದ  ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ವತಿಯಿಂದ ಮೌಕಿಕವಾಗಿ ಸ್ಥಳ ಪರಿಶೀಲನೆ ನೆಡಿಸಿದಾಗ ಪರಂಪರಿಕ ವೈದ್ಯರಲ್ಲದಿರುವುದು ಪರಿಷತ್ ಗಮನಕ್ಕೆ ಬಂದಿರುತ್ತದೆ ಈ ವಿಷಯವನ್ನು ಆಯುಶ್ ಇಲಾಖೆ ಆಯುಕ್ತರಿಗೆ ಪರಿಷತ್ ವತಿಯಿಂದ 20-11-2023ರಂದು ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನೆಡೆಸಬೇಕೆಂದು ಮನವಿ ಪತ್ರವನ್ನು ನೀಡಲಾಗಿದೆ. ಮತ್ತು ಆರೋಗ್ಯ ಸಚಿವರಿಗೂ ಪತ್ರವನ್ನು ನೀಡಲಾಗಿತ್ತು.

ಮಾನ್ಯ ಆರೋಗ್ಯ ಸಚಿವರು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿರುತ್ತಾರೆ. ಆದರೂ ಆಯುಶ್ ಇಲಾಖೆ ಇದ್ಯಾವುದನ್ನೂ ಪರಿಗಣಿಸದೇ ಇವರಿಗೆ ಸೀಟನ್ನು ನೀಡಿದೆ. ಇದರಿಂದ ಮೂಲ ಪರಂಪರಾ ವೈದ್ಯರ ಮಕ್ಕಳಿಗೆ ಅನ್ಯಾಯವಾಗಿದೆ ಎಂದರು.

ಇದನ್ನು ಸರ್ಕಾರ ಆಯುಶ್ ಇಲಾಖೆ ವರತು ಪಡಿಸಿ ಉನ್ನತ ಮಟ್ಟದ ತನಿಕೆ ನೆಡೆಸಿ ಪಾರಂಪರಿಕ ವೈದ್ಯರಿಗೆ ನ್ಯಾಯ ದೂರಕಿಸಿಕೊಡಬೇಕು, ಈ ಸೀಟನ್ನು ನೀಡುವವಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಪರಿಷತ್ತಿನ ರಾಜ್ಯಾದ್ಯಕ್ಷರಾದ ಜಿ. ಮಹದೇವಯ್ಯ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಅಗ್ರಹಿದ್ದಾರೆ.

Related