ಜೂನ್ ತಿಂಗಳು ಭಯಾನಕ

ಜೂನ್ ತಿಂಗಳು ಭಯಾನಕ

ಬೆಂಗಳೂರು : ಇತ್ತೀಚಿನ ಕೆಲ ದಿನಗಳಲ್ಲಿ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಲೇ ಇದೆ. ಭಾನುವಾರ 6,767 ಕೊರೋನಾ ಪ್ರಕರಣಗಳು ದಾಖಲಾಗಿವೆ.

ಮುಂದಿನ ಕೆಲವೇ ವಾರಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳು ಈಗಿರುವುದಕ್ಕಿಂತ ದುಪ್ಪಟ್ಟಾಗಲಿದೆ ಎಂದು ತಜ್ಞರು ಅಭಿಪ್ರಾಯ. ಜೂನ್ ತಿಂಗಳು ಭಯಾನಕವಾಗಿರಲಿದೆ ಎಂದು ಆತಂಕ ಹೊರ ಹಾಕಿದ್ದಾರೆ.

ತಿಂಗಳಿಂದ ಭಾರತದಲ್ಲಿ ಲಾಕ್ಡೌನ್ ಮುಂದುವರಿಯುತ್ತಿದೆ. ಆದರೆ, ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿ ಎನ್ನುವ ಕಾರಣಕ್ಕೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಲಾಕ್ಡೌನ್ ನಡುವೆಯೂ ವೈರಸ್ ಇಷ್ಟೊಂದು ಏರಿಕೆ ಕಂಡಿದ್ದು ಭಾರತದಲ್ಲೇ ಮೊದಲೇನಲ್ಲ. ಇರಾನ್ನಲ್ಲಿ ಒಂದೇ ಬಾರಿಗೆ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಿದ್ದವು. ಆದರೆ, ಅಲ್ಲಿ ತೆಗೆದುಕೊಂಡ ಮುಂಜಾಗ್ರತ ಕ್ರಮದಿಂದ ಏ. ವೇಳೆಗೆ ಕೆಲವೇ ಸಾವಿರ ಆಕ್ಟಿವ್ ಕೇಸ್ಗಳು ಉಳಿದುಕೊಂಡಿದ್ದವು. ಹೀಗಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಯಿತು.

Related