ಜೂನ್‌ 21 ಅಂತರಾಷ್ಟ್ರೀಯ ಯೋಗ ದಿನ

ಜೂನ್‌ 21 ಅಂತರಾಷ್ಟ್ರೀಯ ಯೋಗ ದಿನ

ಬೆಂಗಳೂರು: ಯೋಗ ಎನ್ನುವುದು ಒಂದು ದಿನ ಮಾಡುವ ಕಾಯಕವಲ್ಲ. ಈ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದು. ಜೊತೆಗೆ ಈ ಮಹತ್ವವಾದ ಯೋಗವನ್ನು ದಿನಕ್ಕೆ ಒಮ್ಮೆ ಆದರೂ ಅಳವಡಿಸಿಕೊಂಡರೆ ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿ ಟ್ಟುಕೊಳ್ಳಬಹುದು. ಬೆಳಗ್ಗೆ ಬೇಗ ಏಳುವುದೂ ಒಂದು ಯೋಗವೇ. ಸೂರ್ಯೋದಯದ ವೇಳೆಗೆ ಏಳುವುದರಿಂದಲೂ ಅರ್ಧ ಯೋಗ ಮಾಡಿದಷ್ಟು ಉಪಯೋಗ ಆಗುತ್ತದೆ. ಮಕ್ಕಳು ಬುದ್ಧಿವಂತರಾಗಬೇಕು. ವಯಸ್ಸಾದ ಮೇಲೆ ಸೊಂಟ, ಮೈ ನೋವು ಬರಬಾರು ಎಂದು ಹತ್ತಾರು ಔಷಧ ಬಳಸುತ್ತಾರೆ. ಅದರ ಪರಿಣಾಮ ಏನು ಎನ್ನುವುದು ಕೊರೊನಾ ವೈರಸ್ ಗೊತ್ತು ಮಾಡಿದೆ.

ಭಾರತೀಯ ಸಂಸ್ಕೃತಿಯನ್ನು ಸಾರುವ ಭರತನಾಟ್ಯ , ಹಬ್ಬ ಹರಿದಿನಗಳು ಹೀಗೆ ಹಲವಾರು ಆಚರಣೆಗಳು ಇಂದು ವಿಶ್ವಾದ್ಯಂತ  ಪ್ರಚಲಿತವಾಗುತ್ತಿದೆ. ಅದರಲ್ಲಿ ಬಹು ಮುಖ್ಯವಾದ ಯೋಗ ಸಹ ನಮ್ಮ ಪಾರಂಪರಿಕ ಆಚರಣೆಗಳಲ್ಲೊಂದು. ನಮ್ಮ ನೆಲದಲ್ಲಿ ಹುಟ್ಟಿದ ಈ ವಿಧಾನವು ಋಷಿ ಮುನಿಗಳು ಅನುಸರಿಸಿಕೊಂಡು ಬಂದಿದ್ದಾರೆ. ಯೋಗ ಪ್ರತೀ ದಿನ ಮಾಡುವುದರಿಂದ ಆರೋಗ್ಯದಲ್ಲಾಗುವ ಹಲವು ಬದಲಾವಣೆಗಳನ್ನು ಕಂಡು ಇಂದು ಜಗತ್ತಿನಾದ್ಯಂತ ಯೋಗ ದಿನವನ್ನು ಆಚರಿಸುತ್ತಿದ್ದಾರೆ.

ಯೋಗ ಎಂಬುದು ವ್ಯಕ್ತಿಯ ಪ್ರಜ್ಞೆಯನ್ನು ಆಂತರಿಕ ಆತ್ಮಕ್ಕೆ ಅರ್ಪಿಸುವ ಕ್ರಿಯೆಯನ್ನು ಸೂಚಿಸುತ್ತದೆ. ವ್ಯಕ್ತಿಯ ಮನಸ್ಸು ಮತ್ತು ದೇಹದ ನಡುವೆ ಶಾಂತಿಯನ್ನು ತರಲು ಕೇಂದ್ರೀಕರಿಸುತ್ತದೆ. ಸಂಸ್ಕೃತದ ಯುಜ್ ಮತ್ತು ಯುಜಿರ್ ಪದದಿಂದ ಯೋಗ ಶಬ್ಧ ಬೆಳೆದುಬಂದಿತು. ಯೋಗ ಎಂಬ ಪದದ ಅರ್ಥ ಕೇಂದ್ರೀಕರಿಸುವ ಕ್ರಿಯೆಯಿಂದ ಒಬ್ಬರಿಗೆ ಶಾಂತಿ ಮತ್ತು ಸಾಮರಸ್ಯವನ್ನು ತರುತ್ತದೆ.

ಬೆಳೆದದ್ದು ಹೀಗೆ:

ಸಾವಿರಾರು ವರ್ಷಗಳ ಹಿನ್ನಲೆ ಇರುವ ಯೋಗಕ್ಕೆ ಯಾವುದೇ ರೀತಿಯ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಮಾನವರಿಂದ ಅನುವಂಶಿಕವಾಗಿ ಪಡೆದಿಲ್ಲ ಎಂದು ಗುರುತಿಸಲಾಗಿದೆ. ವೇದದಲ್ಲಿ   ಯೋಗದ ಮೊದಲ ಗುರು ಶಿವ ಎಂದು ಬಿಂಬಿಸಲಾಗಿದೆ. ಹಾಗಾಗಿ ಶಿವನನ್ನು ಆದಿಯೋಗಿ ಎಂದು ಕರೆಯಲಾಗುತ್ತದೆ ಕೂಡ. ಶಿವ ತನ್ನ ಜ್ಞಾನದ ಶಕ್ತಿಯನ್ನು ಯೋಗದ ಮೂಲಕ ಸಪ್ತ ಋಷಿಗಳಿಗೆ ನೀಡಿದರೆಂದು ಹೇಳಲಾಗುತ್ತದೆ.

ಸಪ್ತ ಋಷಿಗಳಲ್ಲಿ ಒಬ್ಬರಾದ ಅಗಸ್ತ್ಯ  ಮಹರ್ಷಿಗಳು ಯೋಗದ ಜ್ಞಾನವನ್ನು ಭರತ ಖಂಡಕ್ಕೆ ಮೊದಲು ಪರಿಚಯಿಸಿ, ಭಾರತೀಯ ಸಂಪ್ರದಾಯಕ್ಕೆ ಸೆಳೆದರು ಎಂದು ಹೇಳಲಾಗುತ್ತದೆ. ಯೋಗದ ಆರಂಭವನ್ನು ಸಿಂಧೂ-ಸರಸ್ವತಿ ನಾಗರಿಕತೆಯಿಂದ ಅಭಿವೃದ್ಧಿಗೊಂಡಿತು. 500 BCE ಸುಮಾರಿಗೆ ರಚಿಸಲಾಗ ಭಗವದ್ಗೀತೆಯು  ಅತ್ಯಂತ ಪ್ರಸಿದ್ಧವಾದ ಯೋಗಶಾಸ್ತ್ರ ಗ್ರಂಥಗಳಾಗಿವೆ. ಕ್ರಿಪೂ 1700ರ ಆಸುಪಾಸಿನ ವೇದಪೂರ್ವ ಕಾಲ ಯೋಗದ ಕುರುಹುಗಳನ್ನು ಹೊಂದಿದೆ. ನಂತರ B.C 500 ರಿಂದ A.C 800ರ ಪತಂಜಲಿಯ  ಯೋಗ ಸೂತ್ರದ  ಮೂಲಕ ಯೋಗದ ವಿಜ್ಞಾನ  ಹೊಸ ರೂಪ ಪಡೆಯಿತು.

ನಂತರದ ಶಾಸ್ತ್ರೀಯ ಯುಗದಲ್ಲಿ ಯೋಗವು ತಂತ್ರ ಯೋಗವನ್ನು ಅಭಿವೃದ್ಧಿಪಡಿಸಿತು. ಇದು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತದೆ. ಇದು ನಮ್ಮ ಆಂತರಿಕ ಆತ್ಮವನ್ನು ಭೌತಿಕ ಅಸ್ತಿತ್ವಕ್ಕೆ ಜೋಡಿಸುವ ಗಂಟು ಮುರಿಯಲು ಸಹಾಯ ಮಾಡುತ್ತದೆ.

ಅಂತರಾಷ್ಟಯ ಯೋಗ ದಿನ:

ಪ್ರತೀ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 2014ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಭಾಷಣ ಮಾಡುವಾಗ ಮೊದಲ ಭಾರಿಗೆ ಪ್ರಸ್ತಾಪಿಸಿದರು. ನಂತರ 2014ರ ಡಿಸೆಂಬರ್ನಲ್ಲಿ ಯುಎನ್ ಜನರಲ್ ಅಸೆಂಬ್ಲಿಯು   ಜೂನ್ 21ರಂದು ಪ್ರತೀ ವರ್ಷ ವಿಶ್ವ ಯೋಗ ದಿನ ಅಥವಾ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಘೋಷಿಸಿತು. ನಂತರ 2015 ರಿಂದ ಪ್ರತೀ ವರ್ಷ ಯೋಗ ದಿನವನ್ನು ಆಚರಿಸಲಾಗುತ್ತಿದೆ.

ಪ್ರಯೋಜನಗಳು:

  1. ಪ್ರತೀ ದಿನ ಯೋಗ ಮಾಡುವುದರಿಂದ ಹೃದಯದ ಸಂಬಂಧಿ ಖಾಯಿಲೆಯನ್ನು ನಿಯಂತ್ರಿಸುತ್ತದೆ.

2.ಯೋಗದಲ್ಲಿ ಕೆಲ ನಿಗದಿತ ಆಸನಗಳನ್ನು ಮಾಡುವುದರಿಂದ ದೇಹ ಫ್ಲೆಕ್ಸಿಬಲ್ ಆಗಿರುವಂತೆ ನೋಡಿಕೊಳ್ಳುತ್ತದೆ.

  1. ಉಸಿರಾಟದ ತೊಂದರೆಗಳನ್ನು ದೂರ ಮಾಡುತ್ತದೆ. ಯೋಗದಲ್ಲಿನ ಉಸಿರಾಟವನ್ನು ಪ್ರಾಣಾಯಾಮ ಎಂದೂ ಕರೆಯುತ್ತಾರೆ. ಅಸ್ತಮಾ ಮತ್ತು ಶ್ವಾಸಕೋಶದ ಸಮಸ್ಯೆಯನ್ನು ದೂರ ಮಾಡುತ್ತದೆ.
  2. ಯೋಗ ಮಾಡುವುದರಿಂದ ಒತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ಆತಂಕ ಖಿನ್ನತೆ, ನಿದ್ರಾಹೀನತೆಗೆ ಉತ್ತಮ ಔಷಧವಾಗಿದೆ.
  3. ಕೆಲ ಅಧ್ಯಯನದ ಪ್ರಕಾರ ಪ್ರತೀ ದಿನ ಯೋಗ ಮಾಡುವುದರಿಂದ ಮಿದುಳಿನ ಸಮಸ್ಯೆಗಳು ದೂರವಾಗುತ್ತದೆ. ಅಲ್ಲದೆ ನೆನಪಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಮಾನಸಿಕ ಹೊಂದಾಣಿಕೆ, ಕಾರ್ಯ ವಿನಿಮಯ, ಡೇಟಾ ವಿಮರ್ಶೆ ಸಾಮರ್ಥ್ಯಗಳು ವೃದ್ಧಿಸುತ್ತದೆ ಎನ್ನಲಾಗಿದೆ.

ವರದಿಗಾರರು

ಚಂದನ ಎಂ (ಅವಲಹಳ್ಳಿ)

Related