ಜುಲೈ, ಸೋಂಕು ಹೆಚ್ಚಳ

ಜುಲೈ, ಸೋಂಕು ಹೆಚ್ಚಳ

ಚಿಕ್ಕಬಳ್ಳಾಪುರ : ಜುಲೈ ತಿಂಗಳಿನಲ್ಲಿ ಹೆಚ್ಚು ಕೊರೋನಾ ವೈರಸ್ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಈ ಬಗ್ಗೆ ಸುಧಾಕರ್ ಮಾತನಾಡಿದ್ದಾರೆ.

ಪರಿಣತರು ಕೊರೋನಾ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಜವಾದ ಕೊರೋನಾ ಸ್ಪೈಕ್ ಜುಲೈನಲ್ಲಿ ಬರಬಹುದು ಅಂತ ತಿಳಿಸಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ. ಮೇ ತಿಂಗಳಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದವು. ಜೂನ್‌ನಲ್ಲಿ ಆ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ ಬಂತು. ಸದ್ಯ, ದಿನಕ್ಕೆ 200 ರಿಂದ 300 ಪ್ರಕರಣಗಳು

ಕರ್ನಾಟಕದಲ್ಲಿ ಪತ್ತೆಯಾಗುತ್ತಿವೆ. ಆದರೆ, ಮುಂದಿನ ತಿಂಗಳು ಇದಕ್ಕಿಂತ ಹೆಚ್ಚಿನ ಪ್ರಕರಣಗಳು ಕಂಡು ಬರಲಿದೆಯಂತೆ.
ನಮ್ಮ ಸರ್ಕಾರಗಳು ತೆಗೆದುಕೊಂಡ ನಿಯಮಗಳಿಂದ ಕೊರೊನಾ ನಿಯಂತ್ರಣದಲ್ಲಿದೆ. ಆದರೆ, ಬೇರೆ ದೇಶಗಳಲ್ಲಿ ಒಂದೆರಡು ತಿಂಗಳಲ್ಲೇ ಸ್ಪೈಕ್ ಬಂದಿತ್ತು. ಭಾರತದಲ್ಲಿ ಐದು ತಿಂಗಳಾದರು ಸ್ಪೈಕ್ ಬಂದಿಲ್ಲ. ಸಾರ್ವಜನಿಕರು ಸಹಕಾರ ಕೊಟ್ಟರೆ ಕರ್ನಾಟಕದಲ್ಲಿ ಸ್ಪೈಕ್ ಆಗಲ್ಲ” ಎಂದು ಸುಧಾಕರ್ ಮನವಿ ಮಾಡಿದ್ದಾರೆ.

Related