ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಪತ್ರಕರ್ತರಿಂದಾಗಬೇಕು: ಸಚಿವ ಮಹದೇವಪ್ಪ

ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಪತ್ರಕರ್ತರಿಂದಾಗಬೇಕು: ಸಚಿವ ಮಹದೇವಪ್ಪ

ಬೆಂಗಳೂರು: ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ಯುವಕ ಯುವತಿಯರು ಪತ್ರಿಕೋದ್ಯಮವನ್ನು ಕಲಿತು ಅದರಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಶ್ರೀ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಮೂರು ತಿಂಗಳ ಪತ್ರಿಕೋದ್ಯಮ ತರಬೇತಿ ನೀಡಲಾಯಿತು.

ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಪತ್ರಕರ್ತರಾಗಿ ಹೊರಹೊಮ್ಮಿದ ಯುವಕ ಯುವತಿಯರಿಗೆ ಇಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್ ಸಿ ಮಹದೇವಪ್ಪ ನವರು ತರಬೇತಿ ಪ್ರಮಾಣ ಪತ್ರವನ್ನು ನೀಡಿ ಅವರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ತಮ್ಮ ಭವಿಷ್ಯವನ್ನು ರೂಢಿಸಿಕೊಳ್ಳುವಂತೆ ಆಶೀರ್ವಚನ ನೀಡಿದರು.

ಪತ್ರಿಕೋದ್ಯಮ ಒಂದು ಹರಿತವಾದ ಲೇಖನಿ ಅದನ್ನು ಸಮಾಜದ ಏಳಿಗೆಯಾಗಿ ಮತ್ತು ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಹಿತವಚನ ಹೇಳಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಚಿವರು, ಪತ್ರಕರ್ತರು ಸಮಾಜದ ನಾಲ್ಕನೇ ಅಂಗವಾಗಿದ್ದು ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿರುತ್ತದೆ. ಜಾತಿ ಬೇದ ಮರೆತು ಪತ್ರಿಕೋದ್ಯಮವನ್ನೇ ಸಮುದಾಯವಾಗಿ ಬಳಸಿಕೊಂಡು ಅನ್ಯಾಯ ಅಕ್ರಮದ ವಿರುದ್ಧ ಧ್ವನಿ ಎತ್ತಬೇಕು ಎಂದು ಹುರಿದುಂಬಿಸಿದರು.

ಸಚಿವರಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದ ತರಬೇತುದಾರ ಚಿದಾನಂದ್ ಮಾತನಾಡುತ್ತಾ ಆದಿ ಜಂಬವ ನಿಗಮ ಮತ್ತು ಶ್ರೀ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಉತ್ಕೃಷ್ಟ ದರ್ಜೆಯ ತರಬೇತಿಯನ್ನು ನೀಡಿ ಪತ್ರಕರ್ತರನ್ನು ಹುಟ್ಟಾಕುವ ಪ್ರಯತ್ನ ಮಾಡುತ್ತಿದೆ ಇದರಿಂದ ಯುವ ಪೀಳಿಗೆಗೆ ಮುಂದಿನ ಜೀವನ ಕಲ್ಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಇನ್ನು ಆಹಾರ ಮತ್ತು ನಾಗರಿಕ  ಸರಬರಾಜು ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪನವರೂ ಸಹ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್ ಸಿ ಮಹದೇವಪ್ಪನವರ ಸಮ್ಮುಖದಲ್ಲಿ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರ ಸಲಹೆಗಾರರಾದ ವೆಂಕಟಯ್ಯನವರು, ಆದಿಜಾಂಭವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ್, ಶ್ರೀ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವ್ಯವಸ್ಥಾಪಕ ನಿರ್ದೇಶಕರಾದ ನಕಿರೆಕಂಟಿ ಸ್ವಾಮಿ, ವಿಶ್ವವಾಣಿ ಪತ್ರಿಕೆಯ ಸುದ್ದಿ ಸಂಪಾದಕರಾದ ಶಿವಕುಮಾರ್ ಬೆಳ್ಳಿತಟ್ಟೆ, ಸಂಜೆ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ್ ಜಿ ಹಾಜರಿದ್ದರು.

Related