ಮನೆ ಮನೆಗೆ ಬಂದ ಜೋಕುಮಾರ ಸ್ವಾಮಿ

ಮನೆ ಮನೆಗೆ ಬಂದ ಜೋಕುಮಾರ ಸ್ವಾಮಿ

ಶಹಾಪುರ :ನಮ್ಮ ನಾಡು ಸಂಪ್ರದಾಯ ಸಂಸ್ಕೃತಿಯ ನೆಲೆ ಬೀಡು ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದ ಆಚರಿಸುತ್ತಾ ಬಂದ ಕೆಲ ಧಾರ್ಮಿಕ ಆಚರಣೆಗಳು ಇಂದಿಗೂ ಪ್ರಸ್ತುತ ಎನ್ನುವುದಕ್ಕೆ ಜೋಕುಮಾರನ ಹಬ್ಬ ಕೂಡಾ ಒಂದು. ಹಿಂದಿನಿಂದ ಹಿರಿಯರು ಆಚರಿಸುತ್ತಾ ಬಂದ ಹಬ್ಬ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.
ಜೋಕುಮಾರ ಹುಟ್ಟಲಿ, ಲೋಕವೆಲ್ಲ ಬೆಳಗಲಿ, ಆ ತಾಯಿ ಹಾಲು ಕರೆಯಲಿ ಕಟ್ಟಿದ ಮೊಸರು ಕಟಿಯಲಿ ನಮ್ಮ ದೇವಿ ಎಂದು ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ ಶೈಲಿಯಲ್ಲಿ ಕೇಳುವುದೇ ಚಂದ. ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರಿ ತುಂಬಿ ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ, ಮಡಿವಾಳರ ಕೇರಿ ಹೊಕ್ಕಾನ ಜೋಕುಕುಮಾರ, ಮುಡಿ ತುಂಬಾ ಹೂ ಮುಡಿದಂತೆ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ. ಈ ರೀತಿ ಜನಪದ ಶೈಲಿಯಲ್ಲಿ ವಿಶಿಷ್ಟವಾಗಿ ಹಾಡುಗಳನ್ನು ಹಾಡುವ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಿಕೊಂಡು ಆತನ ಬಾಯಿಯಲ್ಲಿ ಬೆಣ್ಣೆಯನ್ನು ಇಟ್ಟು ಮನೆಗಳಿಗೆ ಹೊತ್ತೊಯ್ಯುವ ಜೋಗಪ್ಪನ ಹಬ್ಬದ ಆಚರಣೆ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದಿದೆ.
ವಿಘ್ನ ನಿವಾರಕ ಗಣೇಶ್ ವಿಸರ್ಜನೆಯ ನಂತರ ಜನಿಸಿರುವ ಜೋಕುಮಾರ ಸ್ವಾಮಿಯನ್ನು ಹನ್ನೊಂದು ದಿನಗಳ ಕಾಲ ವಿವಿಧ ಗ್ರಾಮಗಳಲ್ಲಿ ಮೇರೆಸುತ್ತಾರೆ. ಭೂಮಿಯಲ್ಲಿ ಮಳೆ ಬೆಳೆ ಜನರ ಕ್ಷೇಮ ತಿಳಿದುಕೊಳ್ಳಲು ಶಿವ ಜೋಕುಮಾರನನ್ನು ಕಳಿಸುತ್ತಾನೆ ಎಂಬುದು ಜನರ ನಂಬಿಕೆ. ಎಣ್ಣೆ ಮತ್ತು ಹುತ್ತಿನ ಮಣ್ಣಿನಿಂದ ತಯಾರಿಸಿದ ಜೋಕುಮಾರನನ್ನು ಹೊಸ ಬಿದಿರಿನ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಬೇವಿನ ಎಲೆ, ಸಜ್ಜೆ, ಜೋಳ ದಾಸವಾಳ ಹೋವಿನಿಂದ ಪೂಜೆ ಮಾಡಿ ಅಲಂಕರಿಸಲಾಗುತ್ತದೆ. ಹೀಗೆ ಬುಟ್ಟಿಯಲ್ಲಿ ಹೊತ್ತೊಯ್ಯುವ ಜೋಕುಮಾರನಿಗೆ ಮನೆ ಮಂದಿ ಎಲೆ ಅಡಿಕೆ, ಅಕ್ಕಿ, ಜೋಳ ಕಾಳುಕಡಿ, ಎಣ್ಣೆ, ಉಪ್ಪು , ಹುಣಸೆ ಒಣ ಮೆಣಸಿನಕಾಯಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಕೊಡುವರು.
ಕೊಟ್;
ಭೂಮಿಯಲ್ಲಿ ಉಂಟಾದ ಮಳೆ ಅಭಾವ ಅರಿಯಲು ಶಿವನು ಕೆಲವರನ್ನೂ ಭೂ ಲೋಕಕ್ಕೆ ಕಳಿಸಿರುತ್ತಾನಂತೆ, ಗಣೇಶ ಜೋಕಪ್ಪರು ಇದ್ದಾರೆ. ಗಣೇಶ ಹಬ್ಬದ ನಂತರ ಬರುವ ಜೋಕಪ್ಪ, ಎಲ್ಲ ಕಡೆ ಓಡಾಡಿ ಕೈಲಾಸಕ್ಕೆ ಹೋಗುತ್ತಾನೆ. ಎಷ್ಟೇಲ್ಲ ಸುತ್ತಾಡಿದರೂ ಸಹ ಒಂದು ಕಾಳು ಸೀಗುವುದಿಲ್ಲಾ. ಮಳೆ ಅಭಾವದಿಂದ ಜನರು ಕಂಗೆಟ್ಟಿದ್ದಾರೆ ಎಂದು ಹೇಳುತ್ತಾನಂತೆ. ಆಗ ಶಿವ ಭೂಮಿಗೆ ಮಳೆ ಸುರಿಸುತ್ತಾನೆ ಎನ್ನುವುದು ಪುರಾತನ ಇತಿಹಾಸ ಹೊಂದಿದೆ.

Related