ಸುಮಾರು 15 ಕೋಟಿ ಬಜೆಟ್​ನಲ್ಲಿ ‘ಜವಾನ್​’ ಚಿತ್ರದ ಸಾಂಗ್​!

ಸುಮಾರು 15 ಕೋಟಿ ಬಜೆಟ್​ನಲ್ಲಿ ‘ಜವಾನ್​’ ಚಿತ್ರದ ಸಾಂಗ್​!

ಬಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆಯನ್ನು ಹೊಂದಿರುವ ನಟ ಎಂದರೆ ಶಾರುಖಾನ್ ಎಂದರೆ ಅದು ತಪ್ಪಾಗಲಾರದು.

ಹೌದು ಹಲವಾರು ವರ್ಷಗಳ ಹಿಂದೆ ಶಾರುಖ್ ಖಾನ್ ಎಂದರೆ ಬಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆಯನ್ನು ನಟನಾಗಿದ್ದರು. ಶಾರುಖ್​ ಖಾನ್​ ನಟನೆಯ ಸಿನಿಮಾ ಎಂದರೆ ಅದ್ದೂರಿಯಾಗಿ ಇರುತ್ತದೆ. ‘ಪಠಾಣ್​’ ಸಿನಿಮಾ ಗೆದ್ದ ಬಳಿಕ ಅವರ ಸಿನಿಮಾಗಳ ಮಾರುಕಟ್ಟೆ ಕೂಡ ವಿಸ್ತಾರ ಆಗಿದೆ. ಈಗ ‘ಜವಾನ್​’ ಸಿನಿಮಾವನ್ನು ತುಂಬ ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದೆ. ಅದಕ್ಕೆ ‘ಜಿಂದಾ ಬಂದಾ..’ ಗೀತೆಯೇ ಸಾಕ್ಷಿ. ಈ ಹಾಡಿನಲ್ಲಿ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಹುಡುಗಿಯರು ಡ್ಯಾನ್ಸ್​ ಮಾಡಿದ್ದಾರೆ. ಹೈದರಾಬಾದ್​, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ನಗರಗಳ ಡ್ಯಾನ್ಸರ್​ಗಳು ಇದರಲ್ಲಿ ಹೆಜ್ಜೆ ಹಾಕಿದ್ದಾರೆ.

ಆಗಸ್ಟ್​ ಮೊದಲ ವಾರದಲ್ಲಿ ‘ಜವಾನ್’ ಚಿತ್ರದ ಫಸ್ಟ್​ ಸಾಂಗ್​ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್​ ಸೇತುಪತಿ, ರಿದ್ಧಿ ಡೋಗ್ರಾ, ಸಾನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ. ಸಿನಿಮಾಗೆ ಅನಿರುದ್ಧ್​ ರವಿಚಂದರ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಸೂಪರ್​ ಹಿಟ್​ ಆದರೆ ಚಿತ್ರದ ಕಲೆಕ್ಷನ್​ಗೆ ಬಹಳ ಅನುಕೂಲ ಆಗಲಿದೆ. ಆ ಹಿನ್ನೆಲೆಯಲ್ಲಿ ಅಭಿಮಾನಿಗಳು ಮೊದಲ ಸಾಂಗ್​ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಶಾರುಖ್​ ಖಾನ್​ ಅವರಿಗೆ ‘ಜವಾನ್​’ ಸಿನಿಮಾದಲ್ಲಿ ಹಲವು ಶೇಡ್​ನ ಪಾತ್ರ ಇದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ಪ್ರಿವ್ಯೂ ವಿಡಿಯೋದಲ್ಲಿ ಅವರು ಬೋಳು ತಲೆಯ ಗೆಟಪ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ.

Related