ಭೂಕಂಪದ ಪ್ರಭಾವಕ್ಕೆ ನಲುಗಿದ ಜಪಾನ್ ಮಂದಿ

ಭೂಕಂಪದ ಪ್ರಭಾವಕ್ಕೆ ನಲುಗಿದ ಜಪಾನ್ ಮಂದಿ

ಜಪಾನ್ ದೇಶದಲ್ಲಿ ಮತ್ತೆ ಮತ್ತೆ ಭೂಕಂಪ ಸಂಭವಿಸುತ್ತಿದ್ದು, ಜಪಾನ್ ನಲ್ಲಿ ವಾಸಿಸುತ್ತಿರುವ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ಜಪಾನ್ ದೇಶದಲ್ಲಿ ಭೂಕಂಪ ಸಂಭವಿಸಿದ್ದರಿಂದ 13 ಜನ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ, ಇನ್ನು ಈ ಭೂಕಂಪದಿಂದ ಜಪಾನ್ ದೇಶದಲ್ಲಿ ನಿರ್ಮಾಣ ಮಾಡಿರುವಂತಹ ಕಟ್ಟಡಗಳು ನೆಲಸಮಾನವಾಗಿದ್ದು ಈ ಕಟ್ಟಡಗಳಲ್ಲಿ ಸಾವಿರಾರು ಜನ ಸಿಲುಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಸರಿಸುಮಾರು ಒಂದೇ ದಿನ 155 ಭೂಕಂಪಗಳು ಸಂಭವಿಸಿದ್ದು, ಹೊನ್ಶುವಿನ ಮುಖ್ಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಕಟ್ಟಡಗಳು ಉರುಳಿದ್ದವು, ರಸ್ತೆಗಳು ಬಿರುಕುಬಿಟ್ಟವು. ಮೀನುಗಾರಿಕಾ ದೋಣಿಗಳು ಕೂಡ ಮುಳುಗಿಹೋಗಿವೆ.

ವಾಜಿಮಾ ಬಂದರಿನಲ್ಲಿ 7 ಮಂದಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೆಚ್ಚಿನ ಭೂಕಂಪಗಳು ರಿಕ್ಟರ್ ಮಾಪಕದಲ್ಲಿ 3 ಕ್ಕಿಂತ ಹೆಚ್ಚು ತೀವ್ರತೆಯನ್ನು ಹೊಂದಿವೆ. ಭೂಕಂಪದ ತೀವ್ರತೆ ಕ್ರಮೇಣ ಕಡಿಮೆಯಾಗಿದೆ.

ಕನಿಷ್ಠ 1.2 ಮೀಟರ್ ಎತ್ತರದ ಅಲೆಗಳು ಜಪಾನ್ ನ ವಾಜಿಮಾ ಬಂದರಿಗೆ ಅಪ್ಪಳಿಸಿತ್ತು. ದೊಡ್ಡ ಸುನಾಮಿ ಅಲೆಗಳು ಅಪ್ಪಳಿಸಿದ ಕುರಿತು ವರದಿಯಾಗಿಲ್ಲ.

 

Related