ಒಂದೇ ದಿನ ಐವರಿಗೆ ಸೋಂಕು

ಒಂದೇ ದಿನ ಐವರಿಗೆ ಸೋಂಕು

ಕಂಪ್ಲಿ : ತಾಲ್ಲೂಕಿನಲ್ಲಿ ಒಂದೇ ದಿನ 5 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಕುಟುಂಬದ ಐದು ಜ£ ಸೋಂಕು ದೃಢಪಟ್ಟಿದೆ. ಇದರಿಂದ ಕಂಪ್ಲಿ ತಾಲ್ಲೂಕಿನ ಜನರ ತಲ್ಲಣಕ್ಕೆ ಕಾರಣವಾಗಿದೆ.

ಮುದ್ದಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪ್ರಭುಕ್ಯಾಂಪಿ(ಸಕ್ಕರೆ ಕಾರ್ಖಾನೆ ಬಳಿ)ನ ಮೂಲತ ನಿವಾಸಿ ಕುಟುಂಬದ ಐದು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 36 ವರ್ಷದ ಪುರುಷ, 31 ವರ್ಷದ ಮಹಿಳೆ, 5 ವರ್ಷ ಬಾಲಕಿ ಮತ್ತು 3 ವರ್ಷದ ಬಾಲಕಿಯರು, 66 ವಯಸ್ಸಿನವರಿಗೆ ಸೋಂಕು ತುಗಲಿದೆ.

ಪ್ರಭುಕ್ಯಾಂಪಿನ ವ್ಯಕ್ತಿಯು ತಮ್ಮ ಕುಟುಂಬದೊAದಿಗೆ ಸಂಡೂರು ತಾಲ್ಲೂಕಿನ ಕುರೇಕುಪ್ಪ ಪಟ್ಟಣದಲ್ಲಿ ಅಂಗಡಿ ನಡೆಸುತ್ತಿದ್ದನು. ಆದರೆ, ಇತ್ತೀಚೆಗೆ ಜಿಂದಾಲ್‌ನಲ್ಲಿ ಕೊರೋನಾ ವೈರಸ್‌ನ ರಣಕೇಕೆಗೆ ಬೆಚ್ಚಿಬಿದ್ದು, ಕಂಪ್ಲಿ ತಾಲ್ಲೂಕಿನ ಪ್ರಭುಕ್ಯಾಂಪಿಗೆ ಬಂದು ವಾಸವಾಗಿದ್ದರು.

ಜೂ.12ರಂದು ಕಂಪ್ಲಿ ಸರ್ಕಾರಿ ಆಸ್ಪತ್ರೆಯ ಕೊರೋನಾ ಫಿವರ್ ಕ್ಲಿನಿಕ್‌ನಲ್ಲಿ ಗಂಟಲು ಮತ್ತು ಮೂಗಿನ ಸ್ವಾö್ಯಬ್ ಸಂಗ್ರಹಿಸಿದ ನಂತರ ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗಾಗಿ ಕಳುಹಿಸಲಾಯಿತ್ತು. ಆದರೆ, ಈಗ ಐದು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೋನಾ ಸೋಂಕು ತಗುಲಿದ ಐವರು ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಲ್ಲೇ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಂದಾಲ್ ನಂಜಿನಿಂದ ಐವರಿಗೆ ಕೊರೋನಾ ವೈರಸ್ ವಕ್ಕರಿಸಿರಬಹುದು ಎಂಬ ಅನುಮಾನಗಳು ಕಾಡತೊಡಗಿವೆ. ಇದರಿಂದ ಕಂಪ್ಲಿ ತಾಲ್ಲೂಕು ಜನರು ನಿಟ್ಟುಸಿರು ಬಿಟ್ಟಿದ್ದರು. ಕೊರೋನಾ ವೈರಸ್ ದೃಢಪಟ್ಟ ಹಿನ್ನಲೆ ಪ್ರಭುಕ್ಯಾಂಪ್‌ನಲ್ಲಿ ಸೋಂಕು ನಾಶಕ ಔಷಧ ಸಿಂಪರಣೆ ಮಾಡಲು ಸೂಚಿಸಿದರು. ಕೊರೋನಾ ವೈರಸ್ ಹರಡುವಿಕೆ ಹಿನ್ನಲೆ ನಾನಾ ಮುಂಜಾಗ್ರತ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಒಟ್ನಲ್ಲಿ ಕಂಪ್ಲಿ ತಾಲ್ಲೂಕಿನಲ್ಲಿ ಕಾಣಿಸಿಕೊಂಡ ಎರಡನೇ ಪ್ರಕರಣದಲ್ಲಿ ಐದು ಜನರಿಗೆ ಕೊರೋನಾ ಆವರಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.

Related