ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನ ಸೋಲಿಸಿದ್ದು ಕಾಂಗ್ರೇಸ್: ತೇಜಸ್ವಿಸೂರ್ಯ

ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನ ಸೋಲಿಸಿದ್ದು ಕಾಂಗ್ರೇಸ್: ತೇಜಸ್ವಿಸೂರ್ಯ

ಬೊಮ್ಮನಹಳ್ಳಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗ ಕಾಂಗ್ರೆಸ್ ಪಕ್ಷದವರೇ ಅವರನ್ನು ಸೋಲಿಸಿದ್ದು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.

ಇಂದು ಬೊಮ್ಮನಹಳ್ಳಿ, ಫಿರಂಗಿಪಾಲ್ಯದಲ್ಲಿ ಅಂಬೇಡ್ಕರ್ ಭವನ ಲೋಕಾರ್ಪಣೆ ಮಾಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನ ಸೋಲಿಸಿದ್ದು ಕಾಂಗ್ರೇಸ್ ನವರು. ಅಂಬೇಡ್ಕರ್ ಬದುಕಿದ್ದಾಗ ಚುನಾವಣೆಯಲ್ಲಿ ಸೋಲಿಸಿದ್ರು. ಅವರು ಸತ್ತ ಮೇಲೂ ಅವರಿಗೆ ಅಪಮಾನ ಮಾಡಿದ್ರು. ಅವರಿಗೆ ಸಿಗಬೇಕಾದ ಗೌರವವನ್ನ ಕಾಂಗ್ರೇಸ್ ನವರು ಕೊಡಲೇ ಇಲ್ಲ. ಭಾರತದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಯೂ ಅವರಿಗೆ ಅವರೇ ಕೊಟ್ಟುಕೊಂಡಿದ್ದಾರೆ. ನೆಹರೂರವರು ಪ್ರಧಾನಿಯಾಗಿದ್ದಾಗ ಭಾರತರತ್ನ ಪ್ರಶಸ್ಥಿಯನ್ನ ಅವರಿಗೆ ಕೊಟ್ಟುಕೊಂಡಿದ್ದಾರೆ. ಇಂದಿರಾಗಾಂದಿಯವರು ಕೂಡ ಅವರಿಗೆ ಅವರೇ ಭಾರತರತ್ನ ಪ್ರಶಸ್ತಿ ತೆಗೆದುಕೊಂಡ್ರು. ರಾಜೀವ್ ಗಾಂಧಿ ಕೂಡ ಅವರಿಗೆ ಅವರೇ ಭಾರತ ರತ್ನ ಪ್ರಶಸ್ಥಿ ಕೊಟ್ಟಿಕೊಂಡ್ರು. ಭಾರತ ರತ್ನ ಪ್ರಶಸ್ಥಿಯನ್ನ ನೆಹರೂ ಫ್ಯಾಮಿಲಿಯವರ ಪ್ರೈವೇಟ್ ಪ್ರಾಪರ್ಟಿ ಮಾಡಿಕೊಂಡಿಡ್ರು ಎಂದು ಹೇಳಿದರು.

1990ರವರೆಗೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಬೇಕೆಂದು ಅವರಿಗೆ ಅನಿಸಿರಲಿಲ್ಲ. ಬಿಜೆಪಿ ಬೆಂಬಲಿತ ಸರ್ಕಾರ ಕೇಂದ್ರದಲ್ಲಿ ಬಂದಾಗ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿದ್ದು. ಅಂಬೇಡ್ಕರ್ ಇದ್ದ ಮನೆ, ಜಾಗವನ್ನ ಮ್ಯೂಸಿಯಂ ಮಾಡಲು ಯಾರು ಚಿಂತಿಸಿರಲಿಲ್ಲ. ದೇಶದ ಕೆಲ ವಿಮಾನ ನಿಲ್ದಾಣಕ್ಕೆ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂದಿಯವರ ಹೆಸರನ್ನ ಇಟ್ಟುಕೊಂಡ್ರು. ಕೇಂದ್ರ ಕೆಲ ಯೋಜನೆಗಳಿಗೆ ಅವರ ಮನೆಯವರುಗಳ ಹೆಸರುಗಳನ್ನೇ ಇಟ್ಟಿಕೊಂಡ್ರು ಎಂದು ನೆಹರು ಕುಟುಂಬದ ವಿರುದ್ಧ ತೇಜಸ್ವಿ ಸೂರ್ಯ ಅವರು ಆಕ್ರೋಶ ಅವರ ಹಾಕಿದ್ದಾರೆ..

Related