ಮೀಸಲಾತಿಗೆ ಸುಗ್ರೀವಾಜ್ಞೆ ಹೊರಡಿಸಿ

ಮೀಸಲಾತಿಗೆ ಸುಗ್ರೀವಾಜ್ಞೆ ಹೊರಡಿಸಿ

ಬೆಂಗಳೂರು: ಸದಾಶಿವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಮಾದಿಗ ಜನಾಂಗದ ಒಳ ಮೀಸಲಾತಿಯನ್ನು  ಜಾರಿಗೊಳಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ವಿಶ್ವ ಆದಿಜಾಂಬವ ಮಹಾಸಭಾ ಅಭಿನಂದನೆ ಸಲ್ಲಿಸಿದೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಕಾಯಾಧ್ಯಕ್ಷ ನರಸಿಂಹ ಮೂರ್ತಿ, ಉಪಾಧ್ಯಕ್ಷ ನರಸಿಂಹ ಮೂರ್ತಿ, ಸಂಸ್ಥಾಪಕ ರಾಜ್ಯಾಧ್ಯಕ್ಷ ಭೀಮರಾಜು ಅವರು ಕೇಂದ್ರ ಸರ್ಕಾರ ಮಾದಿಗರ ಒಳ ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ಆದಷ್ಟು ಬೇಗ ಅನುಷ್ಟಾನ ಮಾಡುವಂತೆ ಇದೇ ವೇಳೆ ಒತ್ತಾಯಿಸಿದರು.

ಆದಿಜಾಂಬವ ಜನಾಂಗಕ್ಕೆ ರಾಜಕೀಯವಾಗಿ ಪ್ರಾತಿನಿಧ್ಯ  ಸಿಗದೆ ವಂಚಿತರಾಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಮಾದಿಗ ಜನಾಂಗಕ್ಕೆ ಮೊದಲ ಆಧ್ಯತೆ ನೀಡುವಂತೆ ಆಗ್ರಹಿಸಿದರು.

ನ್ಯಾ. ಸದಾಶಿವ ಆಯೋಗ ಸಾಮಾಜಿಕ ನ್ಯಾಯದಡಿ ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ತಳ ಸಮುದಾಯವಾದ ನಮ್ಮ ಜನಾಂಗಕ್ಕೆ ಒಳ ಮೀಸಲಾತಿ ನೀಡಲು ಸರ್ಕಾರಕ್ಕೆ ವರದಿಯನ್ನು ಶಿಫಾರಸ್ಸು ಮಾಡಿತ್ತು ಅದನ್ನು ಬೊಮ್ಮಾಯಿ ಅವರ ಸರ್ಕಾರ ಅನುಷ್ಟಾನದ ಮೂಲಕ ನಮ್ಮ ಬೇಡಿಕೆ ಈಡೇರಿಸಿದೆ ಎಂದರು.

ಇದೇ ವೇಳೆ ಸ್ಪೃಶ್ಯ  ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಕೈ ಬಿಟ್ಟು  ನಮ್ಮಲ್ಲಿರುವ ಉಪಜಾತಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಅಸ್ಪೃಶ್ಯರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿದರು.

Related