ಪುಣೆ: ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವ ಹಾಗೆ ಮಾಡಿದ ಇಸ್ರೋ ಕಂಪನಿಯು ಚಂದ್ರಯಾನ-3 ಅತ್ಯಂತ ಯಶಸ್ವಿಗೊಂಡಿರುವುದರಿಂದ ಭಾರತದ ಹೆಗ್ಗಳಿಕೆ ಉನ್ನತ ಸ್ಥಾನಕ್ಕೇರಿದೆ. ಹೌದು ಇಸ್ರೋ ಕಂಪನಿಯ ಚಂದ್ರಯಾನ ತ್ರಿ ಅತ್ಯಂತ ಯಶಸ್ವಿಗೊಂಡಿರುವುದರಿಂದ ಇಸ್ರೋ ಕಂಪನಿಯು ತನ್ನ ಇನ್ನೊಂದು ಹೆಜ್ಜೆ ಮುಂದಿಡಲು ಸಿದ್ಧವಾಗಿದೆ.
ಸಂಸ್ಥೆ (ISRO) ತನ್ನ ಮುಂದಿನ ಯೋಜನೆಯಾದ ಚಂದ್ರಯಾನ-4ರತ್ತ ಗಮನ ಹರಿಸುತ್ತಿದೆ. ಚಂದ್ರನಿಂದ ಮಣ್ಣಿನ ಮಾದರಿಗಳನ್ನು ಮರಳಿ ಭೂಮಿಗೆ ತರುವುದು ಈ ಕಾರ್ಯಾಚರಣೆಯ ಗುರಿಯಾಗಿದ್ದು, ಇದು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತವನ್ನು ಮುಂಚೂಣಿಯಲ್ಲಿರುವ ದೇಶಗಳ ಪೈಕಿ ಅಗ್ರಸ್ಥಾನಕ್ಕೆ ಏರಿಸಲಿದೆ. ಚಂದ್ರಯಾನ-4 ಮಿಷನ್ ಚಂದ್ರನ ಮೇಲ್ಮೈಯಿಂದ ಮಣ್ಣಿನ ಮಾದರಿಯನ್ನು ಮರಳಿ ತರುವ ಗುರಿಯನ್ನು ಹೊಂದಿದೆ ಎಂದು ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್‌ಎಸಿ) ನಿರ್ದೇಶಕ ನಿಲೇಶ್ ದೇಸಾಯಿ ಹೇಳಿದರು.
ಪುಣೆಯಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿಯ 62 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್‌ಎಸಿ) ನಿರ್ದೇಶಕ ನಿಲೇಶ್ ದೇಸಾಯಿ, ಈ ಮಿಷನ್‌ನಲ್ಲಿ ಲ್ಯಾಂಡಿಂಗ್ ಚಂದ್ರಯಾನ-3 ರಂತೆಯೇ ಇರುತ್ತದೆ. ಚಂದ್ರಯಾನ-4ರ ಕೇಂದ್ರ ಘಟಕವು ಚಂದ್ರನ ಸುತ್ತ ಸುತ್ತುತ್ತಿರುವ ಮಾಡ್ಯೂಲ್‌ನೊಂದಿಗೆ ಇಳಿದ ನಂತರ ಹಿಂತಿರುಗಲಿದೆ ಎಂದು ಹೇಳಿದರು.