ಒಳಮೀಸಲಾತಿ ಬಿಜೆಪಿಯ ಐತಿಹಾಸಿಕ ನಿರ್ಧಾರ: ರತ್ನಪ್ರಭಾ

ಒಳಮೀಸಲಾತಿ ಬಿಜೆಪಿಯ ಐತಿಹಾಸಿಕ ನಿರ್ಧಾರ: ರತ್ನಪ್ರಭಾ

ಬೆಂಗಳೂರು: ಒಳಮೀಸಲಾತಿ ನೀಡುವ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಲು ಬಿಜೆಪಿ ಸರ್ಕಾರವೇ ಬರಬೇಕು. ಬಿಜೆಪಿ ಸರ್ಕಾರವು ಈ ಕಾರ್ಯನಿರ್ವಹಣೆಯ ನಿರ್ಧಾರವು ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಬಿಜೆಪಿ ಮುಖಂಡರಾದ ಕೆ. ರತ್ನಪ್ರಭಾ ಹೇಳಿದರು.

ಇಂದು ಕ್ಲಬ್ ನಲ್ಲಿ  ನಡೆಯುತ್ತಿರುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪರಿಶಿಷ್ಟ ಜಾತಿಯಲ್ಲಿ ಕೇವಲ ಕೆಲವೇ ಮಂದಿ ಮೀಸಲಾತಿಯ ಸದುಪಯೋಗ ಪಡೆದುಕೊಳ್ಳಿ. ಬಾಯಿದ್ದವರು ಎಲ್ಲಿ ಬೇಕಾದರೂ ಗೆಲ್ಲುತ್ತಾರೆಂಬಅತೆ ಮೀಸಲಾತಿ ಕೆಲ ವರ್ಗಕ್ಕೆ ಮಾತ್ರ ಮೀಸಲಾಗಿದೆ. ಆದರೆ ಪರಿಶಿಷ್ಟ ಜಾತಿ / ಪಂಗಡದಲ್ಲಿ ಉಪ ಜಾತಿಗಳಿದ್ದು ಅವರಿಗೆ ಮೀಸಲಾತಿ ದೂರದ ಮಾತಾಗಿತ್ತು. ಇಷ್ಟು ವರ್ಷಗಳಿಂದ ಯಾರಿಗೆ ಮೀಸಲಾತಿ ಸಿಗುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಚರ್ಮ ಕೆಲಸಗಾರರು, ದೇವದಾಸಿಯರು ಪ.ಜಾತಿಯ ಉಪ ಜಾತಿಗಳಿಂದ ಬಂದವರು. ಯಾರಿಗೆ ಮೀಸಲಾತಿ ದೊರೆಯುತ್ತದೆ ಎಂಬುದರ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಿರುತ್ತದೆ.

ಶಿಕ್ಷಣ, ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ಸಂಖ್ಯೆ ಕುರಿತಂತೆ 2012 ರಲ್ಲಿ ಆಯೋಗದ ವರದಿ ಬಂದರೂ ಈ ಹಿಂದೆ ಇದ್ದ ಸರ್ಕಾರಗಳು ಯಾವುದೇ ಮೀಸಲಾತಿ ನೀಡಲಿಲ್ಲ. ಆದರೆ ೨೦೧ರ ಜನಗಣತಿ ಆಧಾರದ ಮೇಲೆ ಮೀಸಲಾತಿಗೆ ರಾಜ್ಯ ಸರ್ಕಾರ ನಿರ್ಧರಿಸಿತು. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ಚರ್ಚೆ ನಡೆಸಿ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಅಧಿಕೃತ ನಿರ್ಧಾರ ಪ್ರಕಟಿಸಲಾಯಿತು.

ಈ ಹಿಂದೆ ಜಾರಿಗೆ ತಂದ ಮೀಸಲಾತಿಯಿಂದ ಕೇವಲ ಒಂದು ಉಪಜಾತಿಗೆ ಮಾತ್ರ ಲಾಭವಾಗುತ್ತಿತ್ತು. ಆದರೆ ಇದೀಗ ಬಿಜೆಪಿಯು ಈ ನಿರ್ಧಾರದಿಂದ ಎಲ್ಲಾ ಉಪಜಾತಿಗೂ ಅನುಕೂಲವಾಗಿದೆ. ಬಿಜೆಪಿಯು ಪರಿಶಿಷ್ಟ ಜಾತಿ ಸಮುದಾಯದ ಸುಧಾರಣೆಗೆ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಗೆ ಶೇ.15 ರಿಂದ 17% ಮೀಸಲಾತಿ ಹೆಚ್ಚಿಸುವುದರ ಮೂಲಕ ತನ್ನ ಬದ್ಧತೆಯನ್ನು ಹೆಚ್ಚಿಸಿದೆ ಎಂದು ಬಿಜೆಪಿಯ ನಿರ್ಣಯವನ್ನು ಶ್ಲಾಘಿಸಿದರು.

ಒಳಮೀಸಲಾತಿ ಜೊತೆಗೆ ವರ್ಗೀಕರಣವನ್ನು ಜಾರಿ ಮಾಡಿದ್ದು, ಮೀಸಲಾತಿಯ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಪಡೆಯುವವರ ಬೆಳವಣಿಗೆಗೆ ಇದು ಪೂರಕವಾಗಿದೆ. ವರ್ಗೀಕರಣದಿಂದ ಸರ್ಕಾರಿ ಉದ್ಯೋಗದಲ್ಲಿರುವ ಇಂಜಿನಿಯರಿಯಾಗ್, ವೈದ್ಯಕೀಯ ಮತ್ತು ಇತರ ವೃತ್ತಿಪರ ಕಾಲೇಜುಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು.

ಜನಸಂಖ್ಯೆಗೆ ಪರಿಶಿಷ್ಟ ಸಮುದಾಯದ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ನಿರ್ಧಾರದಿಂದ ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಒಳಮೀಸಲಾತಿಗೆ ಒಳಪಡುವ ಸಮುದಾಯದ ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಸಹಕಾರಿಯಾಗಲಿದೆ, ಸಾಮಾಜಿಕ ಒಳಮೀಸಲಾತಿ ಪರಿಶಿಷ್ಟ ಜಾತಿಯವರಿಗೆ ಸಾಮಾಜಿಕವಾಗಿ ನೀಡಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದ ಈ ನಿರ್ಣಯ ಜನತೆಗೆ ಅರಿ ಪ್ರದರ್ಶನ. ನರೇಂದ್ರ ಮೋದಿಯವರ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಮಾತಿನಂತೆ ಸರ್ವ ಜನಾಂಗದ ಅಭಿವೃದ್ದಿಯಾಗಲಿದೆ. ಮೇ 10 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ನಮ್ಮ ಸಮುದಾಯದವರೆಲ್ಲಾ ಬಿಜೆಪಿಗೆ ಮತ ನೀಡಿ ಕೃತಜ್ಞತೆಯನ್ನು ಸಲ್ಲಿಸಲು ಕೋರಲಾಗಿದೆ.

ಪತ್ರಿಕಾಗೋಷ್ಟಿಯಲ್ಲಿ ನಿವೃತ್ತ ಐಎಸ್ ಎಸ್ ಅಧಿಕಾರಿ ಡಾ. ಬಾಬುರಾವ್ ಮುಡಬಿ, ಕೆಪಿಸಿಸಿ ಸದಸ್ಯರು ಎಚ್.ಎಸ್.ದುಗ್ಗಪ್ಪ, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಪ್ರೊಫೆಸರ್ ಹಾಗೂ ಮುಖ್ಯಸ್ಥರು ಪ್ರೊ. ರುದ್ರಮುನಿ, ಕರ್ನಾಟಕ ಬಾರ್ ಕೌನ್ಸಿಲ್ನ ಮಾಜಿ ಅಧ್ಯಕ್ಷರು ಎಲ್. ಶ್ರೀನಿವಾಸ್ ಬಾಬು.

Related