ವರ್ಗಾವಣೆ ದಂಧೆಯಲ್ಲಿ ಮಧ್ಯವರ್ತಿಗಳ ಕಾರುಬಾರು

ವರ್ಗಾವಣೆ ದಂಧೆಯಲ್ಲಿ ಮಧ್ಯವರ್ತಿಗಳ ಕಾರುಬಾರು

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ವರ್ಗಾವಣೆ ದಂಧೆಯಲ್ಲಿ ಮಧ್ಯವರ್ತಿಗಳದ್ದೇ ಕಾರುಬಾಗಿಬಿಟ್ಟಿದೆ. ಹುಚ್ಚುಡುಗಿ ಮದ್ವೇಲಿ ಉಂಡವನೇ ಜಾಣ ಎನ್ನುವಂತಾಗಿದೆ ಸಾರಿಗೆ ಇಲಾಖೆ ಸ್ಥಿತಿ. ಪ್ರತಿಯೊಂದಕ್ಕೂ ಲಂಚ ಕೊಟ್ಟರೆ ಮಾತ್ರವೆ ಕೆಲಸ ಸಲೀಸು ಇಲ್ಲವೆಂದರೆ ಅದೂ ಆಗಲ್ಲ.
ಇಲ್ಲಿ ಬಹು ಮುಖ್ಯ ಸಂಗತಿಯೆಂದರೆ ನಂಬಿಕಸ್ಥ ಮಧ್ಯವರ್ತಿಗಳು ಹೇಳಿದ್ದೇ ನಡೆಯೋದು. ಸಾರಿಗೆ ಇಲಾಖೆಯ ಭ್ರಷ್ಟ ಅಧಿಕಾರಿಗಳ ಮೇಲೆ ನಿಂತ್ರಣ ಸಾದಿಸಲು ಹೆಣಗಾಡುತ್ತಿರುವ ಸಾರಿಗೆ ಸಚಿವ ಶ್ರೀರಾಮುಲು ಅವರು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರಾದರೂ ನಿಯಂತ್ರಣಕ್ಕೆ ತೆಗೆದು ಕೊಳ್ಳಲಾಗಿಲ್ಲ ಎನ್ನುತ್ತಾರೆ ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರತ ಅಧಿಕಾರಿಗಳೇ ಹೊರ ಹಾಕಿರುವ ಸತ್ಯ ಸಂಗತಿಯಿದು.
ಇದಕ್ಕೆ ತಾಜಾ ಉದಾಹರಣೆಯೆಂಬಂತೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಡಿಪೋದಿಂದ ಇಬ್ಬರು ಚಾಲಕ ನಿರ್ವಾಹಕರು ಹಾಗೂ ಚಾಮರಾಜನರ ಘಟಕದ ಮತ್ತೊಬ್ಬ ಚಾಲಕನನ್ನು ತುಮಕೂರಿಗೆ ಕೌಟುಂಬಿಕ ಸಮಸ್ಯೆ ಆದಾರದ ಮೇರೆಗೆ ವರ್ಗಾವಣೆ ಮಾಡಲು ತುಮಕೂರು ಬಿಜೆಪಿ ಸಂಸದರಾದ ಜಿಎಸ್ ಬಸವರಾಜು ಮತ್ತು ಅವರ ಮಗ ಶಾಸಕ ಜಿ ಬಿ ಜ್ಯೋತಿ ಗಣೇಶ್ ಮುಖ್ಯ ಮಂತ್ರಿಗಳಿಗೆ ಶಿಫಾರಸ್ಸು ಪತ್ರ ನೀಡಿದ್ದರ ಮೇರೆಗೆ ಅವರ ಪತ್ರದಲ್ಲಿ ವರ್ಗಾವಣೆಗೆ ಸೂಚಿಸಿ ಸಹಿ ಮಾಡಿರುವ ಆದೇಶಕ್ಕೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪರಿಸರ ವ್ಯವಸ್ಥಾಕ ವೆಂಕಟೇಶ್ ಅವರು ಕವಡೆ ಕಾಸಿನ ಕಿಮ್ಮತ್ತ ನೀಡಿಲ್ಲ.
ಕಳೆದ ಹಲವು ವರ್ಷಗಳಿಂದ ಬೇರೂಯ್ದುಕೊಂಡಿರುವ ಸಿಬ್ಬಂದಿ ಪರಿಸರ ವ್ಯವಸ್ಥಾಪಕ ವೆಂಕಟೇಶ್ ಅವರಿಗೆ ಸಾರಿಗೆ ಇಲಾಖೆಯ ಆಳ ಅಗಲ ಎಲ್ಲವೂ ಕರಗತ ಮಾಡಿಕೊಂಡು ಲೂಟಿಗೆ ಇಳಿದು ಸಾರಿಗೆ ನೌಕರರನ್ನು ಜೀತದಾಳುಗಳ ರೀತಿಯಲ್ಲಿ ದುಡಿಸಿಕೊಳ್ಳುವದರ ಜೊತೆಗೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆಂದು ದೂರಿ ಮತ್ತೆ ಪ್ರತಿಭಟನೆ ಹಾದಿ ಹಿಡಿದ ನೌಕರರ ಮನವೊಲಿಸುವಲ್ಲಿ ಸಚಿವ ಶ್ರೀರಾಮುಲು ಯಶಸ್ವಿಯಾಗಿದ್ದಾರೆ ಆದರೂ ವ್ಯವಸ್ಥಾಪಕ ನಿರ್ದೇಶಕರಿಗೆ ಲಗಾಮು ಹಾಕಲು ಹೆಣಗಾಡುತ್ತಿದ್ದಾರೆಂದು ಸಾರಿಗೆ ಅಧಿಕಾರಿಗಳೇ ಮಾಧ್ಯಮಗಳ ಮುಂದೆ ಹೆಸರೇಳದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೂವರು ಸಾರಿಗೆ ನೌಕರರ ಹಣ ಪಡೆಕೊಂಡು ಸುಮಾರು ಒಂದು ವರ್ಷವೇ ಕಳೆದಿದೆಯಾದರೂ ನತದೃಷ್ಟ ನೌಕರರಿಗೆ ವರ್ಗಾವಣೆ ಭಾಗ್ಯ ದೊರೆತಿಲ್ಲ. ಇಲ್ಲಿ ಏನಿದ್ದರೂ ಮುಖ್ಯ ವ್ಯವಸ್ಥಾಪಕ ಸಂಚಾಲಕ ಪ್ರಭಾಕರ್ ರೆಡ್ಡಿ ಮತ್ತು ಮಧ್ಯವರ್ತಿ ರಾಜೇಶ್ ಮಾತಿಗೆ ಮಾತ್ರ ಬೆಲೆ ಸಿಗೋದು ಅವರೇಳಿದ ಸಾರಿಗೆ ನೌಕರರಿಗೆ ಮಾತ್ರ ವರ್ಗಾವಣೆ ಮಾಡುತ್ತಿರುವ ನೂರಾರು ಪ್ರಕರಣಗಳು ಬೆಳಕಿಗೆ ಬಂದಿವೆ.
ಹಲವು ವರ್ಗಾವಣೆ ಪ್ರಕರಣಗಳಲ್ಲಿ ಹಣ ವಸೂಲಿ ಬಗ್ಗೆ ದೂರುಗಳು ಬಂದಿದ್ದು, ನೇರವಾಗಿ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿಲ್ಲ ಎಂದು ನನಗೆ ಸ್ಪಷ್ಟನೆ ನೀಡಿದ್ದಾರೆ. ವರ್ಗಾವಣೆ ದಂಧೆಯಲ್ಲಿ ಮಧ್ಯವರ್ತಿಗಳಿದ್ದರೆಂಬ ಆರೋಪಗಳಿವೆ ಸೂಕ್ತ ಕ್ರಮ ಕೈಗೊಳ್ಳುವೆ.
-ಬಿ. ಶ್ರೀರಾಮುಲು, ಸಾರಿಗೆ ಸಚಿವರು.

Related