ಬುದ್ಧಿಜೀವಿಗಳೇ ನಿಮ್ಮ ನಿಲುವು ಬದಲಾಯಿಸಿಕೊಳ್ಳಿ

ಬುದ್ಧಿಜೀವಿಗಳೇ ನಿಮ್ಮ ನಿಲುವು ಬದಲಾಯಿಸಿಕೊಳ್ಳಿ

ಮುದ್ದೇಬಿಹಾಳ  :  ಭಾರತ ಹಲವು ಧರ್ಮ ಆಚಾರ ವಿಚಾರ, ವಿವಿಧ ಸಂಪ್ರದಾಯ, ಸಂಸ್ಕೃತಿಯನ್ನು ಹೊಂದಿದ ದೇಶ. ಇಂತಹ ದೇಶದ ಮಣ್ಣಿನಲ್ಲಿಯೇ ಹುಟ್ಟಿ ಇಲ್ಲಿಯ ನೀರನ್ನೇ ಕುಡಿದು ಬೇರೆ ಪಾಶ್ಚಾತ್ಯ ದೇಶದ ಅನುಕರಣೆ ಮಾಡುವ ಮೂಲಕ ನಮ್ಮ ಜನರ ಮನೋಭಾವನೆ ಬದಲಾವಣೆ ಮಾಡುವ ಹಾಗೂ ಕಾವಿಯನ್ನು ಟೀಕೆ ಮಾಡುವ  ಕೆಲ ಬುದ್ಧಿಜೀವಿಗಳೇ ಮೊದಲು ನಿಮ್ಮ ನಿಲುವನ್ನು ಬದಲಾಯಿಸಿಕೊಳ್ಳಿ ಎಂದು ಮಾಜಿ ಸಚಿವ ಎಸ್. ಕೆ  ಬೆಳ್ಳುಬ್ಬಿ ಟೀಕಾಪ್ರಹಾರ ನಡೆಸಿದರು.

ತಾಲೂಕಿನ ತಾಲೂಕಿನ ಅಡವಿ ಹುಲಗಬಾಳ ಗ್ರಾಮದಲ್ಲಿ ಮಾಜಿ ಜಿಲ್ಲಾ ಸದಸ್ಯ ನಿಂಗಪ್ಪಗೌಡ ಬಪ್ಪರಗಿಯವರ ನೇತೃತ್ವದಲ್ಲಿ ಹಮ್ಮಿಕೊಂಡ ಬೀರಲಿಂಗೇಶ್ವರ, ಮಾಳಿಂಗರಾಯ ಹಾಗೂ ಸಿಡಿಯಾನ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಪೂರ್ವಜರು ಅನಾದಿ ಕಾಲದಿಂದಲೂ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗುರು ಭಕ್ತಿ, ದೇವ ಭಕ್ತಿಯಿಂದ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯ ಮಾಡುತ್ತಲೇ ಬಂದಿದ್ದಾರೆ.

ಪುರಾತನ ಕಾಲದಿಂದಲೂ ಬಡಿಗ ಕುಂಬಾರ, ಕಂಬಾರ, ನೇಕಾರ, ಹೂಗಾರ ಸೇರಿದಂತೆ ಹಲವು ಕರಕುಶಲ ಕಲೆಗಳಿಂದ ನಿರ್ಮಿತಗೊಂಡ ಪರಿಸರ ಸ್ನೇಹಿ, ಆರೋಗ್ಯ ಸ್ನೇಹಿ ಸ್ವದೇಶಿ ವಸ್ತುಗಳು ಬಳಕೆ ಮಾಡುವ ಮೂಲಕ ವಿದೇಶಿ ವಸ್ತುಗಳ ಬಳಕೆ ನಿಲ್ಲಿಸಬೇಕು ಎಂದರು.
ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ಬಡವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಆಚರಿಸಿಕೊಂಡು ಬರುತ್ತಿರುವ ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ ಅವರ ಕಾರ್ಯ ಶ್ಲಾಘನೀಯವಾಗಿದೆ. ಕೊರೊನಾ ಹಾವಳಿಯ ಮಧ್ಯೆ ಸರಳವಾಗಿ ಜಾತ್ರೆಯ ಆಚರಣೆ ಮಾಡಿರುವುದು ಮೆಚ್ಚುವ ಸಂಗತಿ. ಜನತೆ ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆಯ ಸಲಹೆಗಳನ್ನು ಪಾಲಿಸಬೇಕು ಎಂದರು.

 

Related