ನೀರು ಸಂರಕ್ಷಣೆಗೆ ಕಾಮಗಾರಿಗಳ ಪರಿಶೀಲನೆ

ನೀರು ಸಂರಕ್ಷಣೆಗೆ ಕಾಮಗಾರಿಗಳ ಪರಿಶೀಲನೆ

ಯರಗಟ್ಟಿ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ ಇತ್ತಿಚೆಗೆ ಸಮೀಪದ ಸತ್ತಿಗೇರಿ ಮುಗಳಿಹಾಳ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುಷ್ಠಾನ ಗೊಳ್ಳುತ್ತಿರುವ, ಅರಣ್ಯ ಇಲಾಖೆಯ ನೀರು ಸಂರಕ್ಷಣೆ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಅತೀ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಈ ಕುರಿತು ಹೆಚ್ಚಿನ ತಿಳುವಳಿಕೆ ನೀಡಬೇಕು. ಅರಣ್ಯ ಇಲಾಖೆಯಿಂದ ನೆಟ್ಟ ಪ್ರತಿ ನೆಡುತೋಪಿಗೆ ನೀರು ಇಂಗುವಂತೆ ಇಂಗು ಗುಂಡಿ ನಿರ್ಮಾಣ ಮಾಡಬೇಕು ಎಂದರು.

ಈ ಭಾಗದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿಗಳು ಬಹಳಷ್ಟು ಅಚ್ಚುಕಟ್ಟಾಗಿ ನಡೆದಿವೆ. ಇನ್ನಷ್ಟು ಬದುಕುಗಳ ನಿರ್ಮಾಣ, ಕಂದಕಗಳ ನಿರ್ಮಾಣ, ಗೋಕಟ್ಟೆಗಳನ್ನು ನಿರ್ಮಿಸುವಂತೆ ತಿಳಿಸಿದರು.

Related