ಗುರುಭವನ ನಿರ್ಮಾಣಕ್ಕೆ ಒತ್ತಾಯ

ಗುರುಭವನ ನಿರ್ಮಾಣಕ್ಕೆ ಒತ್ತಾಯ

ಗಜೇಂದ್ರಗಡ : ಬಸವಣ್ಣನವರು ಅಂದಿನ ಸಮಾಜದಲ್ಲಿದ್ದ ದೋಷಗಳನ್ನು ಸರಿಪಡಿಸಲು ತಮ್ಮದೇ ಆದ ತತ್ವಗಳನ್ನು ರೂಪಿಸಿಕೊಂಡವರು. ಅವರು ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟವರು. ಯಾರೇ ಆಗಲಿ ತಮ್ಮ ಕಾಯಕವನ್ನು ಮನ:ಪೂರ್ವಕವಾಗಿ ನಿರ್ವಹಿಸಬೇಕು ಎಂದು ಕಸಾಪದ ತಾಲೂಕು ಅಧ್ಯಕ್ಷ ಐ.ಎ ರೇವಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಸಾಪ ಮೈಸೂರು ಮಠದಲ್ಲಿ ಆಯೋಜಿಸಿದ 203ನೇ ವಾರದ ಸಾಹಿತ್ಯ ಚಿಂತನಾ ಗೋಷ್ಠಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗಜೇಂದ್ರಗಡ ತಾಲೂಕು ಘಟಕಕ್ಕೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನಾ ಸಮಾರಂಭ, ಚನ್ನಪ್ಪ ರೇವಡಿ ಯವರ ಸ್ಮರಣಾರ್ಥ, ದತ್ತಿ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿ, ನೂತನ ಸದಸ್ಯರು ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು. ಗುರುಭವನ ನಿರ್ಮಿಸಬೇಕು. ಶಿಕ್ಷಣ ಇಲಾಖೆ ಕಚೇರಿಗಳನ್ನು ಆರಂಭಿಸಿ, ಶಿಕ್ಷಕರ ಕುಂದುಕೊರತೆಗಳನ್ನು ಪರಿಹರಿಸಲು ಹಿರಿಯರ ಮಾರ್ಗದರ್ಶನ ಪಡೆದು ಪ್ರಯತ್ನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ವಿ.ಎ ಹಾದಿಮನಿ, ಎಸ್.ಕೆ ಸರಗಣಾಚಾರ್ಯ,  ಬಿ.ಎಸ್  ಅಣ್ಣಿಗೇರಿ, ಎ.ಕೆ ಒಂಟಿ, ಎಂ.ಎಂ  ಹುನಗುಂದ, ಬಿ.ಎಂ ಹಿರೇಮಠ, ಎಸ್.ಹೆಚ್ ಪರಸಣ್ಣವರ, ಶರಣಮ್ಮ ಅಂಗಡಿ, ಎಫ್.ಎಫ್ ದೊಡ್ಡಮನಿ, ಸುಧಾ ಜಾಡರ್‌ರಿಗೆ ಗೌರವಿಸಿ ಸನ್ಮಾನಿಸಲಾಯಿತು.

Related