ಪಾಲಿಕೆ ಚುನಾವಣೆ ನಡೆಸಲು ಒತ್ತಾಯ

ಪಾಲಿಕೆ ಚುನಾವಣೆ ನಡೆಸಲು ಒತ್ತಾಯ

ವಿಜಯಪುರ : ಮಹಾನಗರ ಪಾಲಿಕೆ ಅವಧಿ 2019 ಜುಲೈ ತಿಂಗಳಲ್ಲೇ ಮುಗಿದಿದೆ, ಆದರೆ ಕೆಲ ಸದಸ್ಯರು ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಿಚಾರ ಇತ್ಯರ್ಥ ಮಾಡಿಕೊಂಡು ಪಾಲಿಕೆ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಒತ್ತಾಯಿಸಿದರು.

ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಇಲ್ಲಿನ ಶಾಸಕರು ಕೈಗೆ ಸಿಗುತ್ತಿಲ್ಲ. ಬಡಾವಣೆಯ ಸಮಸ್ಯೆ ಹೇಳಬೇಕು ಎಂದರು ವಾರ್ಡ್ ಗಳಲ್ಲಿ ಮೆಂಬರ್‌ಗಳಿಲ್ಲ, ಪಾಲಿಕೆ ಅಥವಾ ನಗರಸಭೆ ಚುನಾವಣೆ ನಡೆಯದೇ ಇರುವುದು ಶಾಸಕರಿಗೆ ವರದಾನವಾಗಿದೆ. ಇಷ್ಟೊಂದು ಗ್ಯಾಪ್ ಹಿಂದೆಂದು ಆಗಿಲ್ಲ, ಮಾಜಿ ಮೆಂಬರ್‌ಗಳು ಮಾತನಾಡಿಕೊಂಡು ಕೋರ್ಟ್ ಮೆಟ್ಟಿಲೇರಿದ ವಿಷಯ ಸರಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಯತ್ನಾಳ ಕೈಗೆ ಸಿಗುತ್ತಿಲ್ಲ. ಸ್ಟೇಟ್ ಲೆವಲ್ ಸೆಂಟ್ರಲ್ ಲೇವಲ್ ನಲ್ಲಿ ಬೆಳೆದಿದ್ದಾರೆಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ. ಹಿಂದಿನವರು ಯಾರೂ ರಸ್ತೆಗಳನ್ನು ಮಾಡಿಲ್ಲ ಎಂದು ಶಾಸಕ ಯತ್ನಾಳ ಹೇಳುವುದು ತಪ್ಪು. ನನ್ನ ಕಾಲದಲ್ಲಿ ಸಹಿತ ಸಾಕಷ್ಟು ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಬೇರೆಯವರು ಮಾಡಿದ ಕೆಲಸಕ್ಕೆ ಸಹಿತ ಇಂದು ಪ್ರಚಾರ ಪಡೆಯುತ್ತಿದ್ದು, ವೈಯಕ್ತಿಕ ದ್ವೇಷ ಇದ್ದರೂ ಸಹಿತ ಸಿಎಂ ಅವರ ಪೊಟೋ ಅಭಿವೃದ್ಧಿ ಕಾರ್ಯ ಕ್ರಮಗಳಿಗೆ ಹಾಕಿಕೊಳ್ಳಬೇಕು ಎಂದು ಯತ್ನಾಳಗೆ ಟಾಂಗ್ ನೀಡಿದರು. ಪ್ರತಿ ತಿಂಗಳು ಸುದ್ದಿಗೋಷ್ಠಿ ನಡೆಸಿ ಯತ್ನಾಳರ ಹಲವು ಆರೋಪಗಳಿಗೆ ಪ್ರತ್ಯುತ್ತರ ನೀಡುವುದಾಗಿ ತಿರುಗೇಟು ನೀಡಿದರು.

ಇತ್ತೀಚೆಗೆ ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ಹಾಗೂ ಮಾಜಿ ವಿಡಿಎ ಅಧ್ಯಕ್ಷ ಭೀಮಾಶಂಕರ ಹದನೂರರಿಗೆ ಯತ್ನಾಳ ಲಿಗಲ್ ನೋಟಿಸ್ ನೀಡಿದ್ದ ಕುರಿತು ಮಾತನಾಡಿದ ಅವರು, ಹೀಗೆ ನೋಟಿಸ್ ಯತ್ನಾಳರಿಗೆ ನೀಡುತ್ತಾ ಹೋದರೆ ಕೊರ್ಟ್ ತುಂಬಾ ಯತ್ನಾಳರ ವಿರುದ್ಧ ನೋಟಿಸ್ ಗಳ ಸುರಿಮಳೆ ಆಗಲಿದೆ. ಅವರು ಎಲ್ಲ್ಲರ ವಿರುದ್ಧವೂ ಮಾತನಾಡಿದ್ದಾರೆ, ಸುಖಾ ಸುಮ್ಮನೆ ಆರೋಪ ಮಾಡೋದು ಯತ್ನಾಳ ರ ಖಯಾಲಿ. ಅವರ ಮೆದುಳಿಗೂ ನಾಲಿಗೆಗೆ ಲಿಂಕ್ ತಪ್ಪಿದೆ ಎಂದು ವಾಗ್ದಾಳಿ ನಡೆಸಿದರು.

Related