‘ಡಿ ಬಾಸ್’ ಸಾಂಗ್‌ಗೆ ಸ್ಟೆಪ್ ಹಾಕಿದ ಸೋಂಕಿತರು

‘ಡಿ ಬಾಸ್’ ಸಾಂಗ್‌ಗೆ ಸ್ಟೆಪ್ ಹಾಕಿದ ಸೋಂಕಿತರು

ಮೈಸೂರು : ತಾಲ್ಲೂಕಿನ ವರಕೊಡು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ವೊಂದರಲ್ಲಿ ಸೋಂಕಿತರಲ್ಲಿ ಜೀವನ ಉತ್ಸಾಹವನ್ನು ತುಂಬಲು ವೈದ್ಯಕೀಯ ಸಿಬ್ಬಂದಿಗಳು ರಾಬರ್ಟ್ ಚಿತ್ರದ ‘ಕಣ್ಣು ಹೊಡಿಯಾಕ ಮೊನ್ನೆ ಕಲ್ತಿನಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನು ನೋಡುವ ಸೋಂಕಿತರು ಉತ್ಸಾಹ ಭರಿತವಾಗಿ ವೈದ್ಯರೊಂದಿಗೆ ಸ್ಟೆಪ್ ಹಾಕಿದ್ದಾರೆ.

ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಲು ವೈದ್ಯಕೀಯ ಸಮೂಹ ಈ ನಿರ್ಧಾರವನ್ನು ಕೈಗೊಂಡಿದ್ದು, ಕೋವಿಡ್ ಸೋಂಕಿನ ಭೀತಿಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ.

Related