ಹೆಣ್ಣು ಮಗುವಿನ ತಂದೆಯಾದ ಭಾರತದ ಮೈಕಲ್ ಜಾಕ್ಸನ್

ಹೆಣ್ಣು ಮಗುವಿನ ತಂದೆಯಾದ ಭಾರತದ ಮೈಕಲ್ ಜಾಕ್ಸನ್

ಭಾರತದ ಮೈಕಲ್ ಜಾಕ್ಸನ್ ಎಂದು ಪ್ರಸಿದ್ಧವಾಗಿರುವ ಪ್ರಭುದೇವ ಅವರು ತಮ್ಮ 50ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

ನೃತ್ಯ ಸಂಯೋಜಕ, ನಿರ್ದೇಶಕ ಮತ್ತು ನಟ ಪ್ರಭುದೇವ ಮತ್ತೆ ತಂದೆಯಾಗಿದ್ದಾರೆ. 2020 ರಲ್ಲಿ ಮದುವೆಯಾದ ಅವರ ಎರಡನೇ ಪತ್ನಿ ಹಿಮಾನಿ ಅವರಿಗೆ ಮೊದಲ ಹೆಣ್ಣು ಮಗುವಾಗಿದೆ.

ಇದನ್ನು ಖಚಿತಪಡಿಸಿರುವ ಪ್ರಭುದೇವ, ಇದು ನಿಜ. 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದು, ತುಂಬಾ ಸಂತೋಷ ಮತ್ತು ಸಂಪೂರ್ಣತೆಯ ಭಾವ ಆವರಿಸಿದೆ ಎಂದು ಹೇಳಿದ್ದಾರೆ. ಇದು ಪ್ರಭು ಕುಟುಂಬದ ಮೊದಲ ಹೆಣ್ಣು ಮಗು, ಅವರು ಹಿಂದೆ ಮದುವೆಯಾಗಿದ್ದ ಪತ್ನಿಗೆ ಮೂವರು ಗಂಡು ಮಕ್ಕಳಿದ್ದಾರೆ.

Related