ಬೆಳೆಗಳ ಬೆಳವಣಿಗೆ ಹೆಚ್ಚಿಸುವ ‘ಪಲ್ಸ್ ಮ್ಯಾಜಿಕ್’

ಬೆಳೆಗಳ ಬೆಳವಣಿಗೆ ಹೆಚ್ಚಿಸುವ ‘ಪಲ್ಸ್ ಮ್ಯಾಜಿಕ್’

ಇಂಡಿ : ಲಘು ಪೋಷಕಾಂಶಗಳ ಮಿಶ್ರಣವನ್ನು ಮತ್ತು ಸಸ್ಯ ವರ್ಧಕಗಳನ್ನು ಹೊಂದಿರುವ ಪಲ್ಸ್ ಮ್ಯಾಜಿಕ್ ಬೆಳವಣಿಗೆಯನ್ನು ಹೆಚ್ಚಿಸಿ ಹೂ ಮತ್ತು ಕಾಯಿ ಉದುರುವುದನ್ನು ತಡೆಗಟ್ಟಿ ಹೆಸರು, ಉದ್ದು ಮತ್ತು ತೊಗರಿ ಬೆಳೆಗಳ ಇಳುವರಿ ಹೆಚ್ಚಿಸಿ ಕಾಳುಗಳ ಗಾತ್ರವನ್ನು ಉತ್ತಮಗೊಳಿಸುತ್ತದೆ ಎಂದು ಡಾ. ಸಹನಾ ಹೇಳಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನಿಂದ ಸಂಶೋಧನೆಗೊಂಡು, ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿಯಲ್ಲಿ ತಯಾರಿಸಿ, ರೈತರಿಗೆ ಅನಕೂಲವಾಗಲೆಂದು ಮಾರಾಟ ಮಾಡುತ್ತಿದ್ದರು. ಇದನ್ನು ಮನಗಂಡು ಇಂಡಿ ಮತ್ತು ಸಿಂದಗಿ ಭಾಗದ ರೈತರಿಗೆ ಅನಕೂಲವಾಗಲೆಂದು ಕಲಬುರಗಿಯಿಂದ ಕೃಷಿ ವಿಜ್ಞಾನ ಕೇಂದ್ರ, ಇಂಡಿಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ರೈತರಿಗೆ ಅತಿ ಉಪಯುಕ್ತವಾದ ಪಲ್ಸ್ ಮ್ಯಾಜಿಕ್ ಕೃಷಿ ವಿಜ್ಞಾನ ಕೇಂದ್ರ, ಇಂಡಿಯಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.

Related