ಹೆಚ್ಚಿದ ಕಂದಕಗಳು; ಬಾಲಕಿ ಪ್ರಾಣಪಾಯದಿಂದ ಪಾರು

ಹೆಚ್ಚಿದ ಕಂದಕಗಳು; ಬಾಲಕಿ ಪ್ರಾಣಪಾಯದಿಂದ ಪಾರು

ನರಗುಂದ :  ಪಟ್ಟಣದಲ್ಲಿ ಕಳೆದ ಜು. 20 ರಂದು ಕುರಬಗೇರಿ ಓಣೆಯ ನಿವಾಸಿ ಬಡತನದ ಬೇಗೆಯಲ್ಲಿ ಜೀವನ ನಡೆಸುತ್ತಿರುವ ನಿಂಗಪ್ಪ ನುಗ್ಗಾನಟ್ಟಿ ಅವರ ಮನೆ ಆವರಣದಲ್ಲಿ ಅಂತರ್ಜಲ ಹೆಚ್ಚಳದಿಂದ ದೊಡ್ಡ ಕಂದಕ ಬಿದ್ದು ಅದರಲ್ಲಿ ನಿಂಗಪ್ಪನ ಪುತ್ರಿ ಕಾವ್ಯಾ ನುಗ್ಗಾನಟ್ಟಿ (೧೪) ಸಿಲುಕಿದ್ದಳು. ನಂತರ ಆಕೆಯನ್ನು ಕಂದಕದಿಂದ ತೆಗೆದು ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕಾವ್ಯಾಳ ಪೋಷಕರು ಅಮವಾಸ್ಯೆ ಕಾರಣ ದೇವರ ದರ್ಶನಕ್ಕೆ ತೆರಳಿದ್ದರು. ಮಧ್ಯಾಹ್ನ ಅವರ ಮನೆಯಲ್ಲಿ ದಿಢೀರ್ ಭೂಕುಸಿತವಾಗಿ ದೊಡ್ಡ ಕಂದಕ ಸೃಷ್ಟಿಯಾಗಿತ್ತು. ಅದೇ ಸ್ಥಳದಲ್ಲಿ ಆಟವಾಡುತಿದ್ದ ಕಾವ್ಯಾ ಬೃಹತ್ ಕಂದಕದಲ್ಲಿ ಸಿಲುಕಿ ಅರಚಾಡುವ ಸಂದರ್ಭದಲ್ಲಿ ಆಕೆಯ ತಮ್ಮ ಆಕಾಶ ಇದನ್ನು ಗಮನಿಸಿ ಕಿರುಚಿದ್ದಾನೆ. ಈ ಇಬ್ಬರ ಮಕ್ಕಳ ಕಿರುಚಾಟ ಕೇಳಿದ ಅಕ್ಕಪಕ್ಕದ ಜನ ಕಂದಕದಲ್ಲಿ ಬಿದ್ದ ಬಾಲಕಿಯನ್ನು ರಕ್ಷಿಸಿದರು.

ಎರಡು ಎಕರೆ ಜಮೀನಿನಲ್ಲೇ ದುಡಿದು ಜೀವನ ನಡೆಸುತಿದ್ದಾರೆ. ಅಕ್ಕಪ್ಪಕದ ಜನತೆಯ ಜಮೀನುಗಳಿಗೆ ಕೂಲಿ ಕೆಲಸಕ್ಕೆ ತೆರಳಿ ಬಂದ ಕೂಲಿ ಹಣದಲ್ಲಿ ಅವರ ಜೀವನ ಮುಂದುವರೆದಿದೆ. ಇಂತಹ ಬಡ ಕುಟುಂಬಕ್ಕೆ ಸರ್ಕಾರ ಸಹಾಯ ಹಸ್ತ ನೀಡಬೇಕಿದೆ. ಕಳೆದ ಒಂದು ತಿಂಗಳ ಹಿಂದೆ ಭಾರೀ ಮಳೆ ಕಾರಣ ನಿಂಗಪ್ಪ ನುಗ್ಗಾನಟ್ಟಿ ಅವರ ಮನೆ ಬಿದ್ದಿತ್ತು.

ತಹಶೀಲ್ದಾರ ಕಚೇರಿಯಲ್ಲಿ ಅರ್ಜಿ ನೀಡಿ ಬಹಳ ದಿನ ಕಳೆದರೂ ಪರಿಹಾರ ದೊರೆತಿಲ್ಲವೆಂದು ಅಂತಹ ಬಡ ಕುಟುಂಬಕ್ಕೆ ಪರಿಹಾರ ನೀಡಲು ಜಿಲ್ಲಾ ಮತ್ತು ತಾಲ್ಲೂಕಾಡಳಿತ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

 

Related