ಈರುಳ್ಳಿ ಬೆಲೆ ಏರಿಕೆ?

ಈರುಳ್ಳಿ ಬೆಲೆ ಏರಿಕೆ?

ಬೆಂಗಳೂರು : ದೇಶಾದ್ಯಂತ ಹಲವೆಡೆ ಅಧಿಕ ಪ್ರಮಾಣದ ಮಳೆಯಿಂದಾಗಿ ಬೆಳೆಗಳು ನಾಶವಾಗುತ್ತಿವೆ. ಈ ಹಿನ್ನಲೆಯಲ್ಲಿ ಈರುಳ್ಳಿ ಬೆಳೆ ಕೂಡ ಮಳೆಯಿಂದ ಹಾನಿಗೊಳಗಾಗಿದ್ದು ಮತ್ತೆ ಗ್ರಾಹಕರಿಗೆ ಹೊರೆಯಾಗಲಿದೆ.

ಮಳೆ, ಪ್ರವಾಹ, ಅಂತರರಾಜ್ಯ ಸಂಪರ್ಕ ಸಂವಹನ ಕೊರತೆ ಇದಕ್ಕೆ ಕಾರಣ ದೂಷಿಸಲಾಗಿದೆ. ಲಾಕ್‌ಡೌನ್ ಮುಗಿದ ನಂತರ ಹೆಚ್ಚು ಪೂರೈಕೆಯಾಗಿದ್ದು, ಕಾರಣ ಹಬ್ಬದ ಸಮಯದಲ್ಲೂ ಈರುಳ್ಳಿ ಬೆಲೆ 10 ರುಪಾಯಿ ಇತ್ತು, ಆದರೆ, ಈಗ ಬೆಲೆ ಹೆಚ್ಚಾಗಿದೆ ಎಂದು ಈರುಳ್ಳಿ ವ್ಯಾಪಾರಸ್ಥರು ತಿಳಿಸಿದ್ದಾರೆ.

ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಈಗಾಗಲೇ 50 ರು ತಲುಪಿದೆ. ಮತ್ತು 80 ರೂ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಬ್ಬದ ಸಮದಲ್ಲಿ ಬೆಲೆ ಏರಿಕೆಯಾಗಿತ್ತು.

ಲಾಕ್‌ಡೌನ್ ತೆರವಾದ ನಂತರ ಬೆಲೆ ಏರಿಕೆ ಮಾಡಿದರೇ ವ್ಯಾಪಾರ ಕಳೆದುಕೊಳ್ಳುವ ಭಯದಿಂದಾಗಿ ನಾವು ಬೆಲೆ ಏರಿಕೆ ಮಾಡಿರಲಿಲ್ಲ, ಆದರೆ ಈಗ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ ಎಂದು ಯಶವಂತ ಪುರ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಉದಯ್ ಶಂಕರ್ ತಿಳಿಸಿದ್ದಾರೆ.

Related