ರಾಜ್ಯದಲ್ಲಿ ಕೋವಿಡ್‌-19 ಹೆಚ್ಚಳ

ರಾಜ್ಯದಲ್ಲಿ ಕೋವಿಡ್‌-19 ಹೆಚ್ಚಳ

ಬೆಂಗಳೂರು: ಕೊರೊನಾ ಹೆಮ್ಮಾರಿಯ ಆತಂಕ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಜನರು ಮತ್ತೆ ಕೊರೊನಾಭೀತಿಯಲ್ಲಿ ಬದುಕುವ ಪರಿಸ್ಥಿತಿ ಬಂದಿದೆ.

ಇನ್ನು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಇಂದಿನಿಂದ ರಾಜ್ಯದಲ್ಲಿ ಸುಮಾರು 5000ಕ್ಕೂ ಹೆಚ್ಚು ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಹೌದು, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಪರೀಕ್ಷೆಗೆ ಒಳಪಡಿಸಲಾದ 722 ಮಾದರಿಯಲ್ಲಿ 44 ಮಂದಿಯಲ್ಲಿ ಸೋಂಕು ಧೃಢವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಅವರಲ್ಲಿ 62 ಸೋಂಕಿತರು ಹೋಮ್‌ ಐಸೋಲೇಶನ್‌ನಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ಮಂದಿಯಲ್ಲಿ 6 ಮಂದಿ ಐಸಿಯು ಹಾಗೂ 11ಮಂದಿ ಜನರಲ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ತೀವ್ರತೆ ಕಡಿಮೆಯಿದ್ದರೂ, ಸೋಂಕು ಹರಡುವ ಪ್ರಮಾಣ ಒಮಿಕ್ರಾನ್‌ಗಿಂತ ಅಧಿಕವಾಗಿರಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೊರೊನಾ ಉಪತಳಿ ಜೆಎನ್‌-1 ವೈರಸ್‌ನ ಹರಡುವಿಕೆ ನವೆಂಬರ್‌ನಲ್ಲಿ ಶೇ. 10ರಷ್ಟು ಇತ್ತು. ಡಿಸೆಂಬರ್‌ ಎರಡನೇ ವಾರದ ವೇಳೆ ಶೇ. 30 ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದಲ್ಲಿ ಸೋಂಕಿನ ತೀವ್ರತೆ ಹಾಗೂ ಹರಡುವಿಕೆ ವೇಗವನ್ನು ಅಂದಾಜು ಮಾಡಬಹುದಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಂದಾಜಿಸಿದೆ.

 

Related