ಶಾಸಕರಿಂದ ಗ್ರಾಮದ ಉಪಆರೋಗ್ಯ ಕೇಂದ್ರ ಉದ್ಘಾಟನೆ

ಶಾಸಕರಿಂದ ಗ್ರಾಮದ ಉಪಆರೋಗ್ಯ ಕೇಂದ್ರ ಉದ್ಘಾಟನೆ

ಶಹಾಪುರ : ಗ್ರಾಮಸ್ಥರ ಬಹು ದಿನದ ಬೇಡಿಕೆಯಾಗಿದ್ದ  ಉಕ್ಕಿನಾಳ ಗ್ರಾಮದಲ್ಲಿ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಉಪ ಆರೋಗ್ಯ ಕೇಂದ್ರವನ್ನು ನಿರ್ಮಿಸಿದ್ದು ಗ್ರಾಮಸ್ಥರಿಗೆ ಮತ್ತು ಸುತ್ತಾಮುತ್ತಲಿನ ಜನತೆಗೆ ಆರೋಗ್ಯದ ಸಮಸ್ಯೆಗಳ ಪ್ರಭಾವ ಬೀರುವುದಿಲ್ಲ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಹೇಳಿದರು.
ಉಕ್ಕಿನಾಳ ಗ್ರಾಮದಲ್ಲಿ 2018-19 ನೇ ಸಾಲಿನ ರಾಷ್ಟೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 32 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸಲಾಗಿದ್ದು ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತಾನಾಡಿದ ಅವರು, ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲಾಗಿದ್ದು ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆ ಯಾಗುವುದಿಲ್ಲಾ ಎಂದರು. ಅದೇ ಗ್ರಾಮದಲ್ಲಿ 40 ಲಕ್ಷ ರೂ. ಸಿ.ಸಿ ರಸ್ತೆಯನ್ನು ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ನೇರವೆರಿಸಿ. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಮತ್ತು ಕೆ.ಕೆ.ಆರ್.ಡಿ.ಬಿ ಯೋಜನೆ ಯಡಿಯಲ್ಲಿ 90 ಲಕ್ಷ ರೂ. ವೆಚ್ಚದ ಶಾಲೆ ಕೋಣೆಯನ್ನು ನಿರ್ಮಿಸುತ್ತಿದ್ದು ಪರಿಶೀಲಿಸಿ ಮಾತಾನಾಡಿ, ವಿದ್ಯಾರ್ಥಿಗಳ ಕಲಿಕಾ ದೃಷ್ಠಿಯಿಂದ ಅನುಕೂಲವಾಗಲಿದೆ. ಮತ್ತು ಕಾಮಗಾರಿಯು ಪ್ರಗತಿಯಲ್ಲಿದ್ದು ಗುಣಮಟ್ಟದ ವಸ್ತುಗಳನ್ನು ಬಳಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದರು. ಮತ್ತು ಗ್ರಾಮದಲ್ಲಿ ಶಾಸಕರ ವಿಶೇಷ ಯೋಜನೆ ಯಡಿಯಲ್ಲಿ 5 ಲಕ್ಷ ರೂ. ಮರೆಮ್ಮ ದೇವಸ್ಥಾನದ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಸಲಾದಪೂರ, ತಹಸೀಲ್ದಾರ್ ಜಗನಾಥರೆಡ್ಡಿ, ಟಿಎಚ್‌ಓ ರಮೇಶ್ ಗುತ್ತೇದಾರ್, ಶಿವಮಾಹಂತ ಚಂದಾಪುರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.

Related