ಅಮೇರಿಕಾದಲ್ಲಿ 42,000 ಬಲಿ

ಅಮೇರಿಕಾದಲ್ಲಿ 42,000 ಬಲಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.20: ಅಗೋಚರ ವೈರಿ ಕೊರೊನಾ ವಿರುದ್ಧ ಮಹಾಶಕ್ತಿಶಾಲಿ ದೇಶ ಅಮೆರಿಕ ಹೋರಾಡುತ್ತಾ ಸೋತು ಸುಣ್ಣವಾಗುತ್ತಿದೆ. ಅಮೆರಿಕದಲ್ಲಿ ಪ್ರತಿದಿನ ಸಾರಾಸಗಟಾಗಿ ಸಾಯುವವರ ಪ್ರಮಾಣ ಮುಂದುವರಿಯುತ್ತಲೇ ಇದೆ. ಕೋವಿಡ್-19 ವೈರಸ್ ಮುಂದೆ ಯಾವ ಶಕ್ತಿಶಾಲಿ ದೇಶವೂ ಲೆಕ್ಕಕ್ಕಿಲ್ಲದಂತಾಗಿದೆ. ಅಮೆರಿಕ ಈವರೆಗೆ ಸುಮಾರು 42,000 ಮಂದಿ ಬಲಿಯಾಗಿದ್ದು, 8 ಲಕ್ಷಕ್ಕೂ ಅಧಿಕ ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ತುಸು ಸಮಾಧಾನಕರ ಸಂಗತಿ ಎಂದರೆ ಸರಾಸರಿ 4,000 ಪ್ರಮಾಣದಲ್ಲಿದ್ದ ಸಾವಿನ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಕಳೆದ 24 ತಾಸುಗಳ ಅವಧಿಯಲ್ಲಿ ಅಮೆರಿಕದಲ್ಲಿ 1,997 ಮಂದಿ ಅಸುನೀಗಿದ್ದಾರೆ.

Related