ಕಂಬಳದಲ್ಲಿ ಶ್ರೀನಿವಾಸ ಕಮಾಲ್

ಕಂಬಳದಲ್ಲಿ ಶ್ರೀನಿವಾಸ ಕಮಾಲ್

ಮಂಗಳೂರು, ಫೆ. 24 : ಶರ ವೇಗದ ಶ್ರೀನಿವಾದ ಕಂಬಳ ಓಟದಲ್ಲಿ ಮತ್ತೆ ಕಮಾಲ್ ಮಾಡಿದ್ದಾರೆ. ಕಂಬಳದ ಉಸೇನ್ ಬೋಲ್ಟ್ ಪದಕಗಳ ಸರದಾರ ಶ್ರೀನಿವಾಸ್ಗೌಡ ಅವರ ಕಂಬಳದ ಓಟದಲ್ಲಿ ಪದಕದ ಬೇಟೆ ಮುಂದುವರಿದಿದೆ.
ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ ಅಣ್ಣ-ತಮ್ಮ ಜೋಡುಕೆರೆ ಕಂಬಳದಲ್ಲಿ ಮತ್ತೆ ನಾಲ್ಕು ಪದಕವನ್ನು ಶ್ರೀನಿವಾಸ್ ಗೌಡ ಗಳಿಸಿದ್ದಾರೆ. ಎಲ್ಲಾ ದಾಖಲೆ ಅಳಿಸಿ ಹಾಕಿದ್ದಾರೆ. ಹಗ್ಗ ಕಿರಿಯ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ, ನೇಗಿಲು ಹಿರಿಯ, ಹಗ್ಗ ಹಿರಿಯ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಮತ್ತೆ ಕಂಬಳದಲ್ಲಿ ಕಮಾಲ್ ಮಾಡಿದ್ದಾರೆ.

Related