ಕೃಷಿಯಲ್ಲಿ ಖುಷಿ

  • In State
  • March 12, 2020
  • 203 Views
ಕೃಷಿಯಲ್ಲಿ ಖುಷಿ

ಬೆಂಗಳೂರು, ಮಾ. 12 : ವೃತ್ತಿಯಲ್ಲಿ ಶಿಕ್ಷಕರಾದರೂ ಮೂಲತಃ ಕೃಷಿ ಕುಟುಂಬದವರಾದ ಇವರು ಬೇಸಾಯದಲ್ಲಿ ಅಳವಡಿಸಿದ ಹೈಟೆಕ್ ಪದ್ಧತಿಯಿಂದಾಗಿ ಇಂದು ಇಡೀ ಊರಿಗೆ ಮಾದರಿಯಾಗಿದೆ. ಯಲಹಂಕ ತಾಲ್ಲೂಕಿನ ಹನಿಯೂರು ಗ್ರಾಮದ ಗೋಪಾಲಕೃಷ್ಣ ಬಿಕಾಂ , ಬಿ.ಎಡ್ ಮಾಡಿಕೊಂಡು ಶಾಲೆಯಲ್ಲಿ ಶಿಕ್ಷಕರಾಗಿ ಮಾಡುತ್ತಿದ್ದ ಕೆಲಸದಿಂದ ನೆಮ್ಮದಿಯಜೀವನ ನಡೆಯುತ್ತಿತ್ತು. ಜೊತೆಗೆ ಎಲ್ಲರ ಮೆಚ್ಚಿನ ಶಿಕ್ಷಕರಾಗಿಯೂ ಹೆಸರು ಗಳಿಸಿದ್ದರು.
ಊರು ಬಿಟ್ಟು ಹೋಗಿ ವೃತ್ತಿ ಮಾಡಲು ಬಯಸದ ಇವರು ಪಿತ್ರಾರ್ಜಿತ ಭೂಮಿಯಲ್ಲಿ ಕೃಷಿ ಆರಂಭಿಸಲು ಮನಸ್ಸು ಮಾಡಿದಾಗ ಯಾರು ಇವರ ಸಾಧನೆ ಇಷ್ಟು ಪ್ರೇರಕವಾಗಲಿದೆ ಎಂಬುದನ್ನು ಊಹಿಸಿರಲಿಲ್ಲ. ಒಟ್ಟು ಒಂದೂವರೆ ಎಕರೆ ಭೂಮಿಯಲ್ಲಿ ದ್ರಾಕ್ಷಿಯನ್ನು ಒಂದು ಎಕರೆಯಲ್ಲಿ ಬೆಳೆದಿದ್ದರೆ, ಉಳಿದ 16 ಗುಂಟೆ ಜಾಗದಲ್ಲಿ ಸುಸ್ಥಿರ ಬೇಸಾಯ ಪದ್ದತಿಯಡಿ ಪಾಲಿಹೌಸ್ ನಿರ್ಮಿಸಿಕೊಂಡು ಹೈಟೆಕ್ ಮಾದರಿಯಲ್ಲಿ ಸುದೀರ್ಘ ಬೆಳೆಯಾದ ಕ್ಯಾಪ್ಸಿಕಂ, ರೋಜ್ ಮುಂತಾದ ಬೆಳೆ ಬೆಳೆಯುತ್ತಾ ದೆಹಲಿ, ಮುಂಬೈ ಸೇರಿದಂತೆ ಹೊರ ದೇಶಗಳಿಗೂ ರಫ್ತು ಮಾಡುತ್ತಿರುವುದರಿಂದ ವಾರ್ಷಿಕ 10 ಲಕ್ಷ ಗಳಿಸುತ್ತಿದ್ದಾರೆ.

Related