ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಬೇಕು

ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಬೇಕು

ಶಹಾಪುರ :ಸಾಮಾಜಿಕ ಪರಿಶೋಧನೆ ಅತ್ಯಂತ ಜವಾಬ್ದಾರಿಯಾಗಿದ್ದು, ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಲು ಸರ್ವರ ಉತ್ತರದಾಯಿತ್ವ ಅಗತ್ಯ ಎಂದು ರಾಜ್ಯ ಸಾಮಾಜಿಕ ಪರಿಶೋಧನೆಯ ರಾಜ್ಯ ಸಂಯೋಜಕ ನರಸರೆಡ್ಡಿ ವರಂಗಲ್ ಹೇಳಿದರು.

ನಗರದ ತಾ.ಪಂ ಸಭಾಂಗಣದಲ್ಲಿ ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆಗಳ ಸಾಮಾಜಿಕ ಪರಿಶೋಧಕ ಸಂಯೋಜಕರ ಸಭೆ ಯಲ್ಲಿ ಮಾತನಾಡಿ ಮುಂಬರುವ ಯೋಜನೆಯಡಿ ಪ್ರಧಾನಮಂತ್ರಿ ಆವಾಸ್ ಯೋಜನೆ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ೧೪ನೇ ಹಣಕಾಸು ಯೋಜನೆಯ ಕಾರ್ಯಗಳು ಅತ್ಯಂತ ಪರಿಣಾಮಕಾರಿ ಜಾರಿಯಾಗಲು ಸಾರ್ಥಕ ಪರಿಶ್ರಮವಹಿಸಬೇಕು, ಯೋಜನೆಯ ಅನುಷ್ಠಾನದಲ್ಲಿ ದೋಷಗಳು ಕಂಡರೆ ಸರಿಪಡಿಸುವ ಮೂಲಕ ಯೋಜನೆ ಸಾರ್ಥಕಗೊಳಿಸಬೇಕು ಸಾರ್ವಜನಿಕ ಸಹಭಾಗಿತ್ವದ ಬಗ್ಗೆ ಹೆಚ್ಚು ಕಾಳಜಿವಹಿಸಿ ಎಂದು ತಿಳಿಸಿದರು.

ಸಭೆಯಲ್ಲಿ ರಾಯಚೂರು ಜಿಲ್ಲಾ ಸಂಯೋಜಕ ಬಸವರಾಜ ನಾಗೋಲಿ, ಯಾದಗಿರಿ ಜಿಲ್ಲಾ ಸಂಯೋಜಕಿ ಸುರೇಖಾ ಹರಸುರು, ವಿಜಯಪುರ ಸಂಯೋಜಕ ಬಸವಂತ್ರಾಯ ಕಲ್ಲೂರು, ಜಿಲ್ಲೆಗಳ ತಾಲ್ಲೂಕು ಸಂಯೋಜಕರು ಇದ್ದರು.

Related