ಲಂಚ ಕೇಳಿದ ಅಧಿಕಾರಿಯನ್ನು ಕೂಡಲೇ ಸಸ್ಪೆಂಡ್ ಮಾಡಿ: ಡಿಸಿಎಂ

ಲಂಚ ಕೇಳಿದ ಅಧಿಕಾರಿಯನ್ನು ಕೂಡಲೇ ಸಸ್ಪೆಂಡ್ ಮಾಡಿ: ಡಿಸಿಎಂ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಜನಸ್ಪಂದನ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಮ್ಮಿಕೊಳ್ಳಲಾಗುತ್ತಿದ್ದು ಇಂದು ಶೇಷಾದ್ರಿಪುರಂನಲ್ಲಿ ಈ ಜನಸ್ಪಂದನ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ.

ಶೇಷಾದ್ರಿಪುರಂನಲ್ಲಿರುವಂತಹ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡಲು ಎಲ್ಲಾ ಅಧಿಕಾರಿಗಳಗೆ ಡಿಸಿಎಂ ಸೂಚನೆ ನೀಡಿದ್ದಾರೆ.

ಇನ್ನು ಈ ಜನ ಸ್ಪಂದನ ಕಾರ್ಯಕ್ರಮದಲ್ಲಿ ಶೇಷಾದ್ರಿಪುರದ ನಿವಾಸಿಯಾಗಿರುವ ಮಹಿಳೆ ಒಬ್ಬರು ತನ್ನ ಪೆನ್ಷನ್ ಹಣಪಡಿಯೋಕೆ 50000/- ಸಾವಿರ ಲಂಚ ಕೊಡು ಆಮೇಲೆ ನಿನಗೆ ಪೆನ್ಷನ್ ಹಣ ಒದಗಿಸಿ ಕೊಡುವುದಾಗಿ ಹೇಳಿದ್ದಾರೆ.

2007ರಲ್ಲಿ ರಿಟೈರ್ಡ್ ಆಗಿರುವ ಮಹಿಳೆಗೆ ಇಲ್ಲಿವರೆಗೂ ರಿಟೈರ್ಡ್ ಹಣ ಬಂದಿಲ್ಲವೆಂದು ಮಹಿಳೆಯೊಬ್ಬರು ಡಿಸಿಎಂ ಡಿಕೆ ಶಿವಕುಮಾರ್ ಅಳಲು ತೋಡಿಕೊಂಡಿದ್ದಾರೆ. ಇನ್ನು ಮಹಿಳೆಯರಿಗೆ ಸ್ಪನಿಸಿದ ಡಿಸಿಎಂ, ಯಾರು ಲಂಚ ಕೇಳುತ್ತಿದ್ದಾರೆ ಅವರನ್ನು ತಕ್ಷಣವೇ ಸಸ್ಪೆಂಡ್ ಮಾಡಿ ಆಮೇಲೆ ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ.

AO ಆಗಿರುವಂತಹ ಗಿರೀಶ್ ರವರನ್ನು ಕೂಡಲೇ ಸಸ್ಪೆಂಡ್ ಮಾಡಬೇಕೆಂದು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖಡಕ್ ಸೂಚನೆಯನ್ನು ನೀಡಿದ್ದಾರೆ.

Related