ಈ ಬಿಎಂಟಿಸಿ ಬಸ್ ನಿಲ್ದಾಣ ನೋಡಿದರೆ ನೀವು ಕೂಡ ದಂಗ್ ಆಗ್ತೀರಾ!

ಈ ಬಿಎಂಟಿಸಿ ಬಸ್ ನಿಲ್ದಾಣ ನೋಡಿದರೆ ನೀವು ಕೂಡ ದಂಗ್ ಆಗ್ತೀರಾ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಅಂತರಾಷ್ಟ್ರೀಯ ಕೆಂಪೇಗೌಡ ನಿಲ್ದಾಣ ಟರ್ಮಿನಲ್ 2 ಈಗಾಗಲೇ ವಿವಿಧ ರೀತಿಯಲ್ಲಿ ವಿಶೇಷತೆಗೆ ಹೆಸರುವಾಸಿಯಾಗಿದೆ. ಇದರ ಬೆನ್ನಲ್ಲೇ ಮತ್ತೆ ಇದೀಗ ಇನ್ನೊಂದು ವಿಶೇಷತೆಯನ್ನು ಹೊರತಂದಿದೆ.

ಹೌದು ಬಿಎಂಟಿಸಿಯಿಂದ ಅಂತರಾಷ್ಟ್ರೀಯ ಕೆಂಪೇಗೌಡ ನಿಲ್ದಾಣದಲ್ಲಿ ಅತಿ ವಿಶೇಷವಾದ ಬಸ್ ನಿಲ್ದಾಣವನ್ನು ಸ್ಥಾಪಿಸಿದೆ.

ಯೆಸೆ… ಇಷ್ಟು ದಿನ ಟರ್ಮಿನಲ್ 1 ರಿಂದಲೇ ಪ್ರಯಾಣಿಕರು ಬಿಎಂಟಿಸಿ ವಾಯುವಜ್ರ ಬಸ್‍ಗಳನ್ನ ಹಿಡಿದು ಬೆಂಗಳೂರು ಕಡೆ ಸಾಗಬೇಕಿತ್ತು. ಆದ್ರೆ ಇದೀಗ ಟರ್ಮಿನಲ್ 2ರಲ್ಲೇ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾದೆ.

ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಲಾಗಿರೋ ಟರ್ಮಿನಲ್ 2 ರ ಬಿಎಂಟಿಸಿ ಬಸ್ ನಿಲ್ದಾಣವನ್ನ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹಾಗೂ ಸಚಿವ ಕೆಹೆಚ್ ಮುನಿಯಪ್ಪ ಉದ್ಘಾಟಿಸಿದ್ರು. ಅಂದಹಾಗೆ ವಿಮಾನ ನಿಲ್ದಾಣದ ಬೆಸ್ಮೆಂಟ್ 1 ರಲ್ಲಿ ಈ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಿದ್ದು ಅತ್ಯಾಧುನಿಕ ಸ್ಪರ್ಶದಿಂದ ಎಲ್ಲರ ಗಮನ ಸೆಳೆದಿದೆ. ಮೂಲಭೂತ ಸೌಲಭ್ಯ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಪ್ರಯಾಣಿಕರ ವೈಟಿಂಗ್ ಲಾಂಜ್ ಸೇರಿದಂತೆ ಲಿಫ್ಟ್ ವ್ಯವಸ್ಥೆಯನ್ನ ಮಾಡಲಾಗಿದೆ.

ಬಿಎಂಟಿಸಿ ವಾಯುವಜ್ರ ಹಾಗೂ KSRTC ಪ್ಲೈ ಬಸ್ ನಿಲ್ದಾಣ ಇದಾಗಿದ್ದು ಸಹಾಯವಾಣಿ ಕೇಂದ್ರ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಈ ಬಸ್ ನಿಲ್ದಾಣ ಹೊಂದಿದೆ.

 

Related