ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಿಸಿ

ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಿಸಿ

ವಿಜಯಪುರ: ಸಿಟಿ ಬಸ್ ನಿಲ್ದಾಣದ ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಜೊತೆಗೆ ರಾಣಿ ಚೆನ್ನಮ್ಮನವರ ಜೊತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ನಿರ್ಮಿಸಬೇಕೆಂದು, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಕರ್ನಾಟಕ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿದ್ದು ಭಾವಿಕಟ್ಟಿ ಒತ್ತಾಯಿಸಿದ್ದಾರೆ. 1824ರ ಅಕ್ಟೊಬರ್

21ರಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದ ಆಂಗ್ಲರನ್ನು ರಾಣಿ ಚೆನ್ನಮ್ಮ ನವರು ಸಂಗೊಳ್ಳಿ ರಾಯಣ್ಣ, ಚನ್ನಬಸವಣ್ಣ, ಬಾಳಪ್ಪ ರ ಮುಂದಾಳತ್ವದಲ್ಲಿ ಕಿತ್ತೂರಿನ ಸೈನಿಕರನ್ನು ಮುನ್ನುಗಿಸಿ ಗೆಲುವು ಸಾಧಿಸಿ ರಾಯಣ್ಣ ಈ ಕಾಳಗದಲ್ಲಿ ತನ್ನ ಪರಾಕ್ರಮ ಮೆರೆದಿದ್ದ.
ತದನಂತರ 3 ತಿಂಗಳ ಸಿದ್ಧತೆ ಮಾಡಿಕೊಂಡ ಆಂಗ್ಲರು ಡಿಸೆಂಬರ್ 3, 1824ಕ್ಕೆ ಮತ್ತೆ ಮುಗಿಬಿದ್ದ ಆಂಗ್ಲರು ಮೋಸದಿಂದ ಗೆಲವು ಕಂಡು ಕಿತ್ತೂರು ರಾಣಿ ಚೆನ್ನಮ್ಮನವರನ್ನು ಸೆರೆಹಿಡಿದರು. ಚೆನ್ನಮ್ಮ ಬ್ರಿಟಿಷರ ಸೆರೆಯಾದಾಗ ಮಾರುವೇಷದಲ್ಲಿ ಭೇಟಿಯಾಗಿ ರಾಯಣ್ಣ ಆಡಿದ ಮಾತು ಮರೆಯಲಾಗದು ಎಂದರು.
ರಾಯಣ್ಣ ಹುಟ್ಟಿದ್ದು ಆಗಸ್ಟ್ 15, ಅದು ನಮ್ಮ ಭಾರತಕ್ಕೆ ಸ್ವತಂತ್ರ ಸಿಕ್ಕ ದಿನವಾದರೆ ಆತ ಗಲ್ಲಿಗೇರಿಸಲ್ಪಟ್ಟ ಜನವರಿ 26 ನಮ್ಮ ದೇಶ ಗಣರಾಜ್ಯವಾದ ದಿನ. ಅಂದು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಚ್ಚಿದ ಹೋರಾಟದ ಕಿಚ್ಚು ಎಲರಿಗೂ ಮಾದರಿ. ಹಾಗಾಗಿ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ತಾಯಿ ಮಗನ ಪುತ್ಥಳಿ ನಿರ್ಮಿಸಬೇಕೆಂದು ಒತ್ತಾಯಿಸಿದರು.

Related