ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವುದನ್ನು ಕನಸಲ್ಲೂ ಕಲ್ಪಿಸಿಕೊಂಡಿಲ್ಲ: ವಿ.ಸೋಮಣ್ಣ

ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವುದನ್ನು ಕನಸಲ್ಲೂ ಕಲ್ಪಿಸಿಕೊಂಡಿಲ್ಲ: ವಿ.ಸೋಮಣ್ಣ

ದಾಬಸ್‌ಪೇಟೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿ ಸೋಮಣ್ಣ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ವಿ ಸೋಮಣ್ಣ ಅವರು, ನಾನು ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಕನಸಲ್ಲೂ ಸಹ ಕಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಚುನಾವಣೆಯಲ್ಲಿ ನಿಲ್ಲುವುದು, ಬಿಡುವುದು ಎಂಬುದಕ್ಕಿಂತ ಹೆಚ್ಚಾಗಿ ಅದರ ಅವಶ್ಯಕತೆಯೇ ನನಗಿಲ್ಲ. ವೈಯಕ್ತಿಕ ರಾಜಕೀಯ ಈಗ ಮಾತನಾಡಲಾರೆ, ಸೂಕ್ತ ಸಮಯದಲ್ಲಿ ಆ ಕುರಿತು ಉತ್ತರಿಸುತ್ತೇನೆ ಎಂದರು.

ರಾಷ್ಟ್ರಕ್ಕೆ ಮೋದಿಯವರ ಅವಶ್ಯಕತೆ ಇದೆ. ದೇಶದ ಜನಕ್ಕಷ್ಟೇ ಅಲ್ಲ, ಇಡೀ ಜಗತ್ತಿನ ಜನರೂ ಇಂದಿನ ಸಂದರ್ಭ, ಸನ್ನಿವೇಶಕ್ಕೆ ಮೋದಿಯವರ ಅಗತ್ಯ ಬಹಳಷ್ಟಿದೆ ಎನ್ನುತ್ತಿದ್ದಾರೆ ಎಂದರು.

 

Related