ಸಿನಿಮಾ ಶೈಲಿಯಲ್ಲಿ ಪತ್ನಿಯನ್ನು ಕೊಂದ ಪತಿ..!

  • In Crime
  • August 17, 2022
  • 258 Views
ಸಿನಿಮಾ ಶೈಲಿಯಲ್ಲಿ ಪತ್ನಿಯನ್ನು ಕೊಂದ ಪತಿ..!

ಬೆಂಗಳೂರು, ಆ 17: ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡೆಯೋಕಾಗದೇ ಫಿಲ್ಮಿ ಸ್ಟೈಲ್ ಪ್ಲ್ಯಾನ್ ಮಾಡಿ ಯಾರಿಗೂ ಗೊತ್ತಾಗದಂತೆ ಆಕೆಯ ಕೊಲೆ ಮಾಡಿ ಬಳಿಕ ತಾನೇ ಪೊಲೀಸ್ ಠಾಣೆಗೆ ದೂರು ನೀಡಿದ ಪತಿಯ ಕೃತ್ಯ ತನಿಖೆಯಿಂದ ಬಯಲಾಗಿದೆ. ಹೌದು, ಮೊದಲೇ ಪ್ಲ್ಯಾನ್ ಹಾಕಿ, ಪತ್ನಿಯ ಕೊಲೆ ಮಾಡಿ ಬಳಿಕ ಮಡಿವಾಳ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾನೆ. ಆದರೆ ಅನುಮಾನಗೊಂಡ ಪೊಲೀಸರು ಆತನನ್ನೇ ವಿಚಾರಣೆ ನಡೆಸಿದಾಗ ಖತರ್ನಾಕ್ ಪ್ಲ್ಯಾನ್ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ಬೆಂಗಳೂರಿನ ಮಡಿವಾಳದ ಪೃಥ್ವಿರಾಜ್, ಜ್ಯೋತಿಯನ್ನು 8 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಮದುವೆಯ ಬಳಿಕ ನಿರಂತರವಾಗಿ ಜಗಳವಾಡುತ್ತಿದ್ದರಿಂದ ಪೃಥ್ವಿರಾಜ್ ಟಾರ್ಚರ್ ತಡೆಯಲಾಗದೇ ಪತ್ನಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ.

ಮೊದಲೇ ಯೋಜಿಸಿದ ಪ್ಲ್ಯಾನ್ನಂತೆ ಪೃಥ್ವಿರಾಜ್ ತನ್ನ ಹಾಗೂ ಪತ್ನಿಯ ಮೊಬೈಲ್ ಫೋನ್ಗಳನ್ನು ಮನೆಯಲ್ಲಿಯೇ ಇರಿಸಿ ಟ್ರಿಪ್ಗೆ ಕರೆದುಕೊಂಡು ಹೋಗಿದ್ದ. ಆಗಸ್ಟ್ 2 ರಂದು ಹೆಂಡತಿಯನ್ನು ಉಡುಪಿಯ ಮಲ್ಪೆ ಬೀಚ್ಗೆ ಕರೆದುಕೊಂಡು ಹೋಗಿ, ಅಲ್ಲಿ ಸಮುದ್ರದಲ್ಲಿ ಮುಳುಗಿಸಿ ಆಕೆಯ ಕೊಲೆ ಮಾಡುವುದು ಪೃಥ್ವಿರಾಜ್ನ ಪ್ಲ್ಯಾನ್ ಆಗಿತ್ತು. ಬಳಿಕ ಅದನ್ನು ನ್ಯಾಚುರಲ್ ಡೆತ್ ಎಂದು ಬಣ್ಣಿಸುವ ಯೋಜನೆ ಮಾಡಿದ್ದ. ಆದರೆ ಸಮುದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಆತನ ಪ್ಲ್ಯಾನ್ ಫ್ಲಾಪ್ ಆಗಿತ್ತು.

ನಾನು ಹೆಂಡತಿಯಿಂದ ಬಹಳ ಕಿರಿಕಿರಿ ಅನುಭವಿಸಿದ್ದೇನೆ. ಆಕೆ ಇನ್ನೊಬ್ಬ ಗೆಳೆಯನನ್ನು ಹೊಂದಿದ್ದಳು. 2 ಬಾರಿ ಯುಪಿಎಸ್ಸಿ ಎಕ್ಸಾಂ ಬರೆದಿದ್ದ ಆಕೆ ಟ್ರೈನಿಂಗ್ಗಾಗಿ ದೆಹಲಿಗೆ ಹೋಗಿದ್ದಳು. ಅಲ್ಲಿ ಅವಳು ಒಬ್ಬ ಯುವಕನೊಂದಿಗೆ ಸಖ್ಯ ಬೆಳೆಸಿದ್ದಳು. ಹೀಗಾಗಿ ನಾನು ಆಕೆಯ ಕೊಲೆಗೆ ಪ್ಲ್ಯಾನ್ ಮಾಡಿದ್ದೆ ಎಂದು ಬಾಯ್ಬಿಟ್ಟಿದ್ದಾನೆ.

Related