ಬಿಜೆಪಿಯಲ್ಲಿ ನೂರಾರು ಆಕಾಂಕ್ಷಿಗಳ ಲಾಬಿ

ಬಿಜೆಪಿಯಲ್ಲಿ ನೂರಾರು ಆಕಾಂಕ್ಷಿಗಳ ಲಾಬಿ

ಬೆಂಗಳೂರು : ವಿಧಾನ ಸಭೆಯಲ್ಲಿರುವ ಪಕ್ಷದ ಶಾಸಕರ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ 4, ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನ ಗೆದ್ದುಕೊಳ್ಳಬಹುದು. ಈ ಸಂಬAಧ ಮುಂದಿನ ವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ

ಕಾರ್ಯರ್ತರಿಗೆ ಟಿಕೆಟ್ ನೀಡಿದ ಬೆನ್ನಲ್ಲೇ ಪಕ್ಷದ ಕಚೇರಿ ಬಾಗಿಲು ತಟ್ಟುವವರ ಸಂಖ್ಯೆ ಹೆಚ್ಚಾಗಿದ್ದು, ಜೂ.29ರಂದು ನಡೆಯುವ ಪರಿಷತ್ ಚುನಾವಣೆಗೆ ಆಕಾಂಕ್ಷಿಗಳು ಮುಗಿಬೀಳುತ್ತಿದ್ದಾರೆ.

ನಾಮನರ್ದೇಶನ ಸ್ಥಾನಗಳು ಸೇರಿ ವಿಧಾನ ಪರಿಷತ್ನ ಒಟ್ಟು 12 ಸದಸ್ಯ ಸ್ಥಾನಗಳು ತೆರವಾಗಲಿದ್ದು, ಬಿಜೆಪಿಗೆ ಸುಲಭವಾಗಿ 9 ಸ್ಥಾನಗಳು ದೊರೆಯಲಿವೆ. 9 ಸದಸ್ಯ ಸ್ಥಾನಕ್ಕಾಗಿ ಸುಮಾರು 100 ಆಕಾಂಕ್ಷಿಗಳು ಲಾಬಿ ನಡೆಸಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ಟಿಕೆಟ್ ನೀಡಿದ ಮೇಲೆ ಬಿಜೆಪಿಯಲ್ಲಿ ಎಲ್ಲವೂ ದೆಹಲಿಯಿಂದಲೇ ನಿಗಧಿಯಾಗುತ್ತಿವೆ. ಹೀಗಾಗಿ ತಳಮಟ್ಟದ ಕರ್ಯರ್ತರಿಗೆ ಬಿಜೆಪಿ ಟಿಕೆಟ್ ನೀಡಿದ ಮೇಲೆ ಸಾಮಾನ್ಯ ಕರ್ಯರ್ತರು ಖುಷಿಯಾಗಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಚಿವರಾದ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಕೂಡ ಪರಿಷತ್ ಸದಸ್ಯ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ, ಇವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಇನ್ನು ಅಭ್ರ‍್ಥಿಗಳ ಆಯ್ಕೆ ನಂತರ ಅಸಮಾಧಾನ ಭಿನ್ನಾಭಿಪ್ರಾಯ ಸಾಮಾನ್ಯ. ಕರ್ಕಮಿಟಿ ರ್ಹ ಅಭ್ರ‍್ಥಿಗಳನ್ನು ಆಯ್ಕೆ ಮಾಡುತ್ತದೆ. 2009ರಲ್ಲಿ ಬಿಜೆಪಿ ಆರು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿತ್ತು, ಆದರೆ ಈ ಬಾರಿ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ರ್ಕಾರ ಅಧಿಕಾರದಲ್ಲಿದೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ತಿಳಿಸಿದ್ದಾರೆ.

ಜೂ.18 ರೊಳಗೆ ಕೇಂದ್ರ ಮತ್ತು ರಾಜ್ಯ ನಾಯಕರು ಅಭ್ರ‍್ಥಿಗಳ ಪಟ್ಟಿ ಅಂತಿಮಗೊಳಿಸಲಿದ್ದಾರೆ. ತಳಮಟ್ಟದ ಕರ್ಯರ್ತರಿಗೆ ಅವಕಾಶ ನೀಡುವುದರಿಂದ ಪಕ್ಷದ ಕರ್ಯರ್ತರಲ್ಲಿ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದು ಪಕ್ಷದ ಮತ್ತೊಮ್ಮೆ ಪ್ರಮುಖರು ಹೇಳಿದ್ದಾರೆ.

ಜೂ.30ರಂದು ತೆರವಾಗಲಿರುವ ರಾಜ್ಯ ವಿಧಾನ ಪರಿಷತ್ನ 7 ಸ್ಥಾನಗಳಿಗೆ ಜೂ.29ರಂದು ಚುನಾವಣೆ ನಿಗದಿಯಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಿರುವ ಜಯಮ್ಮ, ಬೋಸರಾಜ್, ಹೆಚ್.ಎಂ.ರೇವಣ್ಣ, ನಸೀರ್ ಅಹ್ಮದ್, ಎಂಸಿ ವೇಣುಗೋಪಾಲ್ ( ಕಾಂಗ್ರೆಸ್), ಟಿ.ಎ. ಶರವಣ (ಜೆಡಿಎಸ್), ಡಿ.ಯು.ಮಲ್ಲಿಕರ್ಜುನ್ (ಪಕ್ಷೇತರ), ನಾಮ ನರ್ದೇಶನಗೊಂಡಿರುವ ಜಯಮಾಲಾ ರಾಮಚಂದ್ರ, ಐವಾನ್ ಡಿಸೋಜ, ಇಕ್ಬಾಲ್ ಅಹಮ್ಮದ್ ಸರಡಗಿ, ತಿಪ್ಪಣ್ಣ ಕಮಕನೂರ್ (ಕಾಂಗ್ರೆಸ್), ನಿವೃತ್ತರಾಗಲಿದ್ದಾರೆ.

Related