ಕೊರೋನಾ : ಹಿರಿಯ ನಟ ಸಾವು

  • In Cinema
  • July 18, 2020
  • 494 Views
ಕೊರೋನಾ : ಹಿರಿಯ ನಟ ಸಾವು

ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟ ಹುಲಿವಾನ್ ಗಂಗಾಧರಯ್ಯ ಅವರು ಕೊರೋನಾ ಸೋಂಕಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದರಾದ ಅವರು, 118 ಸಿನಿಮಾಗಳಲ್ಲಿ 1500 ನಾಟಕಗಳಲ್ಲಿ ನಟಿಸಿದ್ದರು.

ಪ್ರಸಿದ್ಧ ಪ್ರೇಮಲೋಕ ಧಾರವಾಹಿ ಶೂಟಿಂಗ್‍ನಲ್ಲಿದ್ದಾಗಲೇ ಜ್ವರ ಕಾಣಿಸಿಕೊಂಡಿತ್ತು. ನಂತರ ಉಸಿರಾಟದ ಸಮಸ್ಯೆ ಎದುರಾದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

Related