ಫ್ಲವರ್ ಶೋಗೆ ಈ ಬಾರಿ ಭರ್ಜರಿ ರೆಸ್ಪಾನ್ಸ್

ಫ್ಲವರ್ ಶೋಗೆ ಈ ಬಾರಿ ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಫ್ಲವರ್ ಶೋಗೆ ಅತ್ಯಂತ ಉತ್ತಮವಾದ ಸ್ಪಂದನೆ ಸಿಕ್ಕಿದ್ದು, ಈ ಬಾರಿ ನಿರೀಕ್ಷೆಗೂ ಮೀರಿ ಆದಾಯ ಒದಗಿ ಬಂದಿದೆ ಎಂದು ತಿಳಿದು ಬಂದಿದೆ.

ಹೌದು, ಜನವರಿ 26 ಗಣರಾಜ್ಯೋತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಸ್ಯಕಾಶಿ ಲಾಲ್‌ಬಾಗ್‌ ನಲ್ಲಿ ಫ್ಲವರ್ ಶೋ ಏರ್ಪಾಡು ಮಾಡಲಾಗಿದ್ದು ಈ ಬಾರಿ ಫ್ಲವರ್ ಷೋರ್ ನಲ್ಲಿ 1.44 ಕೋಟಿ ರೂಪಾಯಿ ಗಳಿಸಿದೆ ಎಂದು ತಿಳಿದುಬಂದಿದೆ.

ಇನ್ನು ಈ ಬಾರಿಫ್ಲ ವರ್‌ ಶೋನಲ್ಲಿ ಜಗತ್ತಿನ ಮೊದಲ ಸಂಸತ್ ಕಲ್ಪನೆ ಮೂಡಿದ್ದು 12ನೇ ಶತಮಾನದಲ್ಲಿ. ವಚನಕಾರರ ಅನುಭವದಿಂದ ಮೂಡಿದ್ದೇ ಅನುಭವ ಮಂಟಪ. ಇಂತಹ ಅನುಭವ ಮಂಟಪ ಪುಷ್ಪಗಳಲ್ಲಿ ಅರಳಿ ನಿಂತಿದೆ.

ಅಂದಹಾಗೆ ಜ. 18 ರಿಂದ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ನಾಳೆ (ಜ. 28) ತೆರೆ ಬೀಳಲಿದೆ. ಈ ಮಧ್ಯೆ ಇದುವರೆಗೆ 2.24 ಲಕ್ಷಕ್ಕೂ ಮಿಕ್ಕಿ ಜನ ಫ್ಲವರ್‌ ಶೋಗೆ ಭೇಟಿ ನೀಡಿದ್ದಾರೆ.  ಅಷ್ಟೇ ಅಲ್ಲ, ನಿನ್ನೆ ಗಣರಾಜ್ಯೋತ್ಸವ ಸರಕಾರಿ ರಜೆ ಹಿನ್ನೆಲೆ ಒಂದೇ ದಿನ 96,500 ಮಂದಿ ಲಾಲ್‌ಬಾಗ್‌ ಫ್ಲವರ್‌ ಶೋಗೆ ಭೇಟಿ ನೀಡಿದ್ದಾರೆ.

ಆದ್ದರಿಂದ ತೋಟಗಾರಿಕಾ ಇಲಾಖೆ ರಿಪಬ್ಲಿಕ್‌ ಡೇನಿಂದಾಗಿ ಭರ್ಜರಿ 65 ಲಕ್ಷ ರೂಪಾಯಿಯನ್ನು ನಿನ್ನೆ ಒಂದೇ ದಿನದಲ್ಲಿ ಸಂಗ್ರಹಿಸಿದೆ. ಇದುವರೆಗೂ ಭೇಟಿ ನೀಡಿರುವ 2.24 ಲಕ್ಷ ಜನರಿಂದ ಇದುವರೆಗೆ 1.44 ಕೋಟಿ ರೂಪಾಯಿಗೂ ಮಿಕ್ಕಿ ಆದಾಗ ಗಳಿಸಿದೆ.

 

Related