ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕಟ್ಟಡಕ್ಕೆ ಶಂಕುಸ್ಥಾಪನೆ

ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕಟ್ಟಡಕ್ಕೆ  ಶಂಕುಸ್ಥಾಪನೆ

ಕೋಲಾರ.16. ಸೆ:ಕೋಲಾರದ ಕೊತ್ತೂರು ಮಂಜುನಾಥ ರವರಿಂದ ಡಾ. ಬಿಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಕಾಮಗಾರಿಗೆ  ಗುದ್ದಲಿ ಪೂಜೆ ಮಾಡಿದರು.
ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಕೋಲಾರ ರವರ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ 10:30 ಕ್ಕೆ ಕೋಲಾರ ನಗರದಲ್ಲಿ ಸರ್ಕಾರಿ ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗೆ ಅಂದಾಜು ವೆಚ್ಚ (600)ಆರುನೂರು ಲಕ್ಷಗಳನ್ನು ಮೀಸಲಿಟ್ಟಿದ್ದು. ಇದರ ಗುತ್ತಿಗೆಯನ್ನು ಯು ವಿ ಆರ್ ಪ್ರಾಜೆಕ್ಟ್ ಕ್ಲಾಸ್ ಒನ್ ಗುತ್ತಿಗೆದಾರರು ಬೆಂಗಳೂರು ಇವರಿಗೆ ಸರ್ಕಾರವು 422 ಲಕ್ಷಗಳಿಗೆ ಸಂಪೂರ್ಣ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಪರವಾನಿಗೆ ನೀಡಿದೆ.
ಇದೇ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹಾಸ್ಟೆಲ್ ಗಳಲ್ಲಿ ಓದಿದಂತಹ ಮತ್ತು ಊಟ ಮಾಡಿದಂತ ವ್ಯಕ್ತಿಗಳು ಪೂರ್ವ ಜನ್ಮದ ಪುಣ್ಯ ಪಡೆದಿರುವಂತವರು ಎಂದು ಹೇಳುತ್ತ ಅಂಬೇಡ್ಕರ್ ಅವರ ಆಶೀರ್ವಾದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಇಲ್ಲಿ ಬಂದಿದ್ದ ದಲಿತ ಸಂಘಟನೆಗಳ ಮುಖಂಡರುಗಳಿಗೆ ಹಾಗೂ ನನಗೆ ಸದಾ ಅಂಬೇಡ್ಕರ್ ಅವರ ಆಶೀರ್ವಾದ ಇರಲಿ ಎಂದು ಹೇಳಿ ಗುತ್ತಿಗೆದಾರರಿಗೆ ಕಟ್ಟಡ ಕಾಮಗಾರಿ ಸಂಪೂರ್ಣ ಸ್ವಚ್ಛತವಾಗಿ ಮಾಡ ಬೇಕೆಂದು ಗುತ್ತಿಗೆದಾರರಿಗೆ ಸಂದರ್ಭದಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ, ಎಂಎಲ್ಸಿ ಗೋವಿಂದ್ ರಾಜು, ಎಂಎಲ್ಸಿ ಅನಿಲ್ ಕುಮಾರ್ ರವರು ನೂತನ  ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related