ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಸೋಂಕಿತ ಮಹಿಳೆ ಬಲಿ

ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಸೋಂಕಿತ ಮಹಿಳೆ ಬಲಿ

ಗದಗ : ಜೀಮ್ಸ್ ನಲ್ಲಿ ಸಿಬ್ಬಂದಿ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನಗರದ ಅಂಬೇಡ್ಕರ್ ಬಡಾವಣೆಯ 52 ವರ್ಷದ ಕೋವಿಡ್ ಸೋಂಕಿತೆ ಸಾವಿಗೀಡಾಗಿದ್ದಾರೆ.

ಜೀಮ್ಸ್ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆದು ಬೇರೆ ವೆಂಟಿಲೇಟರ್ ಅಳವಡಿಸುವಾಗ ದುರಂತವಾಗಿದೆ. ಚೆನ್ನಾಗಿದ್ದ ವೆಂಟಿಲೇಟರ್ ತೆಗೆದು ಮತ್ತೊಂದು ವೆಂಟಿಲೇಟರ್ ಅಳವಡಿಸಲು ಮುಂದಾಗಿದ್ದ ವೇಳೆ 10 ನಿಮಿಷದಲ್ಲಿಯೇ ಮಹಿಳೆ ನರಳಿ ಪ್ರಾಣ ಬಿಟ್ಟಿದ್ದಾರೆ.

ಕಣ್ಣು ಮುಂದೆಯೇ ಅಕ್ಕನ ಜೀವ ಹೋಗಿದ್ದನ್ನು ಸಹೋದರ ಕಣ್ಣಾರೆ ಕಂಡಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಅಲ್ಲದೇ ಜೀಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ರೀತಿ ದುರಂತವಾಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Related