ಆಸ್ಪತ್ರೆ ಸಿಬ್ಬಂದಿಗೂ ಸೋಂಕು

ಆಸ್ಪತ್ರೆ ಸಿಬ್ಬಂದಿಗೂ ಸೋಂಕು

ಮಧುಗಿರಿ : ತಾಲ್ಲೂಕಿನಲ್ಲಿ 12 ಜನರಿಗೆ  ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 38 ವರ್ಷದ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿರುವುದು ಎಲ್ಲರ ನಿದ್ದೆಗೆಡಿಸಿದೆ.

ತಾಲ್ಲೂಕಿನ ಶ್ರಾವಂಡನಹಳ್ಳಿಯ 26 ವರ್ಷದ ಮಹಿಳೆ, ಗೊಂದಿಹಳ್ಳಿಯ 65 ವರ್ಷದ ವೃದ್ದ, ಚಿಕ್ಕದಾಳವಟ್ಟದ 63 ವರ್ಷದ ವೃದ್ಧ, ಅಮರಾವತಿಯ 22 ವರ್ಷ ಯುವಕ, ಆಚೇನಹಳ್ಳಿಯ 8 ವರ್ಷದ ಬಾಲಕ, ಮಧುಗಿರಿ ಪಟ್ಟಣದ ರಾಘವೇಂದ್ರ ಕಾಲೊನಿಯ 41 ವರ್ಷದ ವ್ಯಕ್ತಿ, ಶಂಕರ್ ಚಿತ್ರಮಂದಿರ ಸಮೀಪದ 37 ವರ್ಷದ ವ್ಯಕ್ತಿ, ಹಾಗೂ ಲೋಕೋಪಯೋಗಿ ವಸತಿ ಗೃಹದಲ್ಲಿರುವ 28 ವರ್ಷದ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 25 ಮಂದಿ ಸೋಂಕಿತರಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ, ಇಬ್ಬರು ಗುಣಮುಖರಾಗಿದ್ದು, 126 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. 1270 ಮಂದಿಯ ಪರೀಕ್ಷಾ ವರದಿ ಬರಬೇಕಿದೆ.

Related