ಭೀಕರ ಅಪಘಾತ, 9 ಮಂದಿ ದುರ್ಮರಣ

ಭೀಕರ ಅಪಘಾತ, 9 ಮಂದಿ ದುರ್ಮರಣ

ಗಾಂಧಿನಗರ, ಮಾ. 3 : ತೈಲ ಟ್ಯಾಂಕರ್, ಬಸ್ ಮತ್ತು ಜೀಪ್ ನಡುವೆ ಡಿಕ್ಕಿಯಾಗಿ ಕನಿಷ್ಠ 9 ಮಂದಿ ಮೃತಪಟ್ಟು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಗುಜರಾತಿನ ಟಪಿ ಜಿಲ್ಲೆಯ ಪೋಖ್ತಾನ್ ಪಟಿಯಾದಲ್ಲಿ ಸಂಭವಿಸಿದೆ. ತಾಪಿ ಜಿಲ್ಲೆಯ ಸಂಗಧ್ ತಾಲೂಕಿನ ಪೋಖ್ರಾನ್ ಗ್ರಾಮದ ಬಳಿ ಹೆದ್ದಾರಿ ಸಂಖ್ಯೆ 56ರಲ್ಲಿ ಗುಜರಾತ್ ರಾಜ್ಯರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್, ತೈಲ ಟ್ಯಾಂಕರ್ ಮತ್ತು ಜೀಪ್ ಮಧ್ಯೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗಧ್ನಿಂದ ಸೂರತ್ಗೆ ಹೋಗುತ್ತಿದ್ದ ತೈಲ ಟ್ಯಾಂಕರ್ ಹೆದ್ದಾರಿಯ ರಾಂಗ್ ಸೈಡ್ನಲ್ಲಿ ಚಲಿಸುತ್ತಿತ್ತು. ಕುಶಾಲ್ಗಢ್ನಿಂದ ಉಕೈಗೆ ಹೋಗುತ್ತಿದ್ದ ಬಸ್ಗೆ ಡಿಕ್ಕಿ ಹೊಡೆಯಿತು. ಬಸ್ನ ಹಿಂದೆ ಬರುತ್ತಿದ್ದ 10 ಜನರಿದ್ದ ಖಾಸಗಿ ಜೀಪ್ ಸಹ ವಾಹನಕ್ಕೆ ಅಪ್ಪಳಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಲಕನ ನಿರ್ಲಕ್ಷ್ಯವೇ ಕಾರಣ. ಆತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ವ್ಯಾರಾ ಸರ್ಕಾರಿ ಆಸ್ಪತ್ರೆ ಮತ್ತು ಸಂಗಧ್ ನ್ಯೂ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Related