ರೈತರ ಅಗತ್ಯಗಳನ್ನು ಪೂರೈಸುವಲ್ಲಿ ಮುಂದಾದ ಹೋಂಡಾ ಕಂಪೆನಿ

ರೈತರ ಅಗತ್ಯಗಳನ್ನು ಪೂರೈಸುವಲ್ಲಿ ಮುಂದಾದ ಹೋಂಡಾ ಕಂಪೆನಿ

ಬೆಂಗಳೂರು : ಹೋಂಡಾ ಇಂಡಿಯಾ ಪವರ್ ಪ್ರಾಡಕ್ಟ್ಸ್ ಹೈಡಿಸ್ಚಾರ್ಜ್ ಮತ್ತು ಹೈಹೆಡ್ ಪೋರ್ಟಬಲ್ ವಾಟರ್ ಪಂಪ್‌ಗಳ ಮೂಲಕ ರೈತರ ಅಗತ್ಯವನ್ನು ಪೂರೈಸುತ್ತದೆ.

ನೀರಾವರಿ ಕೆಲಸದಲ್ಲಿ ಸುಧಾರಣೆಗಳನ್ನು ತರುವುದು ಕಂಪೆನಿಯ ಉದ್ದೇಶವಾಗಿದೆ. ಜೂನ್ 01 ಭಾರತದ ವಿದ್ಯುತ್ ಉತ್ಪನ್ನಗಳ ಪ್ರಮುಖ ತಯಾರಕರಾದ ಹೋಂಡಾ ಇಂಡಿಯಾ ಪವರ್ ಪ್ರಾಡಕ್ಟ್ಸ್ ಲಿಮಿಟೆಡ್ (ಎಚ್‌ಪಿಪಿ) ಇಂದು ತಮ್ಮ 2-ಇಂಚಿನ ಮತ್ತು 3-ಇಂಚಿನ ಶ್ರೇ ಣಿಯ ಉತ್ಪನ್ನಗಳಲ್ಲಿ “ಸೆಲ್ಫ್ ಪ್ರೈಮಿಂಗ್’’ – “ಗ್ಯಾಸೋಲಿನ್’’ (ಪೆಟ್ರೋಲ) ಚಾಲಿತ ನೀರಿನ ಪಂಪ್ ಗಳೊಂದಿಗೆ ಕೃಷಿ ಭೂಮಿಯನ್ನು ಸಮರ್ಥವಾಗಿ ಮತ್ತು ಆರ್ಥಿಕವಾಗಿ ಕಡಿಮೆ ವೆಚ್ಚದಲ್ಲಿ ನೀರಾವರಿ ಮಾಡುವ ರೈತರ ಅಗತ್ಯವನ್ನು ಪೂರೈಸಿದೆ. ತಮ್ಮ ಬೆಳೆಗಳಿಗೆ ನೀರಾವರಿ ಮಾಡಿಕೊಂಡು ಉತ್ಪಾದಕತೆ ಹೆಚ್ಚಿಸಲು ಬಯಸುವ ರೈತರು ಕಡಿಮೆ ತೂಕ ಮತ್ತು ಆರ್ಥಿಕ ಮಿತವ್ಯಯದ ಪಂಪ್ ಗಳನ್ನು ಬಯಸುತ್ತಿದ್ದಾರೆ.

ಇತ್ತೀಚಿನ ಸೇರ್ಪಡೆಯಾದ “ಡಬ್ಲ್ಯುಬಿ20ಎಕ್ಸ್ಡಿ’’ ಮತ್ತು “ಡಬ್ಲ್ಯುಬಿ30 ಎಕ್ಸ್ಡಿ” ಮಾದರಿಗಳು ಕ್ರಮವಾಗಿ ಗುಡ್ಡಗಾಡು ಪ್ರದೇಶಗಳು ಮತ್ತು ಬಯಲು ಪ್ರದೇಶಗಳಲ್ಲಿನ ಬೆಳೆಗಳ ಅಗತ್ಯತೆಗಳನ್ನು ಪೂರೈಸುತ್ತವೆ ಮತ್ತು ಇದು ಭಾರತದ ವಿವಿಧ ಪ್ರದೇಶಗಳು ಮತ್ತು ವಿಭಾಗಗಳಲ್ಲಿನ ರೈತರನ್ನು ಆಕರ್ಷಿಸುತ್ತದೆ.

ಹೊಸ ಉತ್ಪನ್ನಗಳ ಮಾರುಕಟ್ಟೆ ಪ್ರವೇಶವನ್ನು ಘೋಷಿಸಿದ ಗಗನ್ ಪಾಲ, ಉಪಾಧ್ಯಕ್ಷರು, ಹೋಂಡಾ ಇಂಡಿಯಾ ಪವರ್ ಪ್ರಾಡಕ್ಟ್ಸ್ ಲಿಮಿಟೆಡ್, ಸೇಲ್ಸ್, ಮಾರ್ಕೆಟಿಂಗ್ ಮತ್ತು ಸರ್ವಿಸ್ ವಿಭಾಗ ಅವರು ಹೇಳಿದರು, “ಭಾರತೀಯ ರೈತರು ತಮ್ಮ ನಂಬಿಕೆಯನ್ನು ಮುಂದುವರೆಸುತ್ತಿದ್ದಾರೆ ಮತ್ತು ಹೋಂಡಾ ಗ್ಯಾಸೋಲಿನ್ ಚಾಲಿತ ನೀರಿನ ಪಂಪ್‌ಗಳನ್ನು ಬೇರೆ ಯಾವುದೇ ಕೊಡುಗೆಗಳಿಗಿಂತ ಹೆಚ್ಚು ಆರಿಸಿಕೊಳ್ಳುತ್ತಾರೆ.

ಸಂಪೂರ್ಣ ಹೋಂಡಾ ಪ್ಯಾಕೇಜ್ ರೈತರ ಅಗತ್ಯತೆಗಳಾದ ಇಂಧನ ಆರ್ಥಿಕತೆ, ಸುಲಭ ಸಾಗಣೆ, ಸುಲಭ ನಿರ್ವಹಣೆ ಮತ್ತು ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಪೂರೈಸುತ್ತವೆ. ಹೋಂಡಾ ವಾಟರ್ ಪಂಪ್‌ಗಳು ನಿರಂತರ ಕಾರ್ಯಕ್ಷಮತೆಯನ್ನು ಹೊಂದಿರುತ್ತವೆ. ಏಕೆಂದರೆ ಅವುಗಳು ದೀರ್ಘಕಾಲ ಉಳಿಯುವಂತೆ ನಿರ್ಮಿಸಲ್ಪಟ್ಟಿವೆ ಮತ್ತು ಇವು 600 ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಮಾರಾಟಗಾರರ ರಾಷ್ಟ್ರವ್ಯಾಪಿ ನೆಟ್‌ವಕ್ಸ್ನ ಬೆಂಬಲ ಹೊಂದಿವೆ.ಈ ಎರಡು ಹೊಸ ಮಾದರಿಗಳು ಹೋಂಡಾ ನೀರಿನ ಪಂಪ್‌ಗಳ ವ್ಯಾಪ್ತಿ ಮತ್ತು ಮಾರುಕಟ್ಟೆಯನ್ನು ಇನ್ನಷ್ಟು ಹೆಚ್ಚಿಸುವುದರ ಜತೆಗೆ ವ್ಯಾಪಕವಾದ ಕೃಷಿ ನೀರಾವರಿ ಅಗತ್ಯಗಳನ್ನು ಪೂರೈಸುತ್ತವೆ’’ .

Related